ಸ್ಯಾಂಡಲ್‌ವುಡ್‌ನಲ್ಲಿ ನಟಿಯರಿಗೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಬಗ್ಗೆ ನಟಿ ನೀತು ಶೆಟ್ಟಿ (Neethu Shetty) ಧ್ವನಿಯೆತ್ತಿದ್ದಾರೆ. ಕೇರಳದ ಹೇಮಾ ಕಮಿಟಿಯಂತೆ ನಮ್ಮಲ್ಲೂ ಆಗಬೇಕು. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದ ಮಾತ್ರಕ್ಕೆ ನಾವು ನಮ್ಮ ಗೌರವ ಬಿಟ್ಟು ಕೊಡಬೇಕಾಗಿಲ್ಲ ಎಂದು ನೀತು ಮಾತನಾಡಿದ್ದಾರೆ. ಇದನ್ನೂ ಓದಿ:ಭಾವಿ ಪತ್ನಿ ಜೊತೆ ಬಿಗ್ ಬಾಸ್‌ಗೆ ಬರಲಿದ್ದಾರೆ ಸಮಂತಾ ಮಾಜಿ ಪತಿ
‘ಫೈರ್’ ಸಂಸ್ಥೆ ರಚನೆ ಆಗಿದ್ದು, 2017ರಲ್ಲಿ ಶುರು ಆಯಿತು. ಇದರಲ್ಲಿ ಸಮಾನ ಮನಸ್ಕರರು ಇದ್ದಾರೆ. ಚೇತನ್ ಅಹಿಂಸಾ ಸ್ಟಾರ್ಟ್ ಮಾಡಿ ಕವಿತಾ ಲಂಕೇಶ್ ಇದರ ಪ್ರೆಸಿಡೆಂಟ್ ಆಗಿದ್ದರು. ಇನ್ನೂ ಲೈಂಗಿಕ ದೌರ್ಜನ್ಯ ಅಂತಾ ಬಂದಾಗ ಐಡ್ಯಾಲಾಜಿ, ಧರ್ಮ, ಸ್ಟೇಟಸ್ ಏನೂ ಬರೋದಿಲ್ಲ. ಎಲ್ಲಾ ಇಂಡಸ್ಟ್ರಿಯಲ್ಲಿ ಹೇಗಿದೆ ನಮ್ಮ ಇಂಡಸ್ಟ್ರಿಯಲ್ಲೂ ಹಾಗೆ ಇದೆ ಎಂದು ಗಾಳಿಪಟ ನಟಿ ನೀತು ಮಾತನಾಡಿದ್ದಾರೆ.
ಐಟಿ ಕ್ಷೇತ್ರದಲ್ಲಿ ಲೈಂಗಿಕ ಕಿರುಕುಳ ಆದಾಗ ಅದನ್ನು ವರದಿ ಮಾಡೋಕೆ ಅಂತಲೇ ಒಂದು ಕಮಿಟಿ ಇದೆ. ಹಲವು ವರ್ಷಗಳ ಹಿಂದೆ ಇದರ ಬಗ್ಗೆ ಧ್ವನಿ ಎತ್ತಿದಾಗ ನಮ್ಮನ್ನೇ ಬ್ಲೇಮ್ ಮಾಡೋಕೆ ನೋಡಿದರು. ಕೇರಳದಲ್ಲಿ ಹೇಮಾ ಕಮಿಟಿ ಮಾಡಿದ್ದು ಒಂದು ಕ್ರಾಂತಿ ಥರ ಆಗಿದೆ ಎಂದಿದ್ದಾರೆ ನೀತು.
ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಸೇಫ್ ಆಗಿರಬೇಕು. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದ ಮಾತ್ರಕ್ಕೆ ನಾವು ನಮ್ಮ ಗೌರವ ಬಿಟ್ಟು ಕೊಡಬೇಕಾಗಿಲ್ಲ. ಇಲ್ಲಿಯವರೆಗೂ ಅದರ ಬಗ್ಗೆ ಮಾತನಾಡೋಕೆ ಆಗುತ್ತಿರಲ್ಲಿಲ. ನಿವೃತ್ತ ನ್ಯಾಯಾಧೀಶರಾಗಿರೋರನ್ನು ಕೊಡಿ ಅವರೇ ಈ ಕುರಿತು ನಿಗಾ ವಹಿಸಲಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ.
ನನಗೆ ಸಿನಿಮಾ ಬೇಗ ಸಿಕ್ಕಿತ್ತು. ಹಾಗೆಯೇ ಬೇಗ ಸಕ್ಸಸ್ ಸಿಕ್ತು. ನಮ್ಮ ಮನೆಯಲ್ಲಿ ದುಡ್ಡಿಗೋಸ್ಕರ ಸಿನಿಮಾನೇ ಮಾಡ್ಬೇಕು ಅಂತ ಸಂದರ್ಭ ಇರಲಿಲ್ಲ. ನನಗೆ ಏನಾದರೂ ಮಾತನಾಡಿದ್ರೆ ನಾನು ತಿರುಗಿ ಮಾತನಾಡಬಹುದಿತ್ತು. ಆದರೆ ಕೆಲವರಿಗೆ ಹಾಗಿರೊಲ್ಲ ಜೀವನ ನಡೆಸೋಕೆ ಸಿನಿಮಾ ನಂಬಿಕೊಂಡಿರುತ್ತಾರೆ. ತುಂಬಾ ಮುಗ್ದ ಜನ ಚಿತ್ರರಂಗಕ್ಕೆ ಬರುತ್ತಾರೆ. ಅವರಿಗೆ ಸುರಕ್ಷತೆ ಇಂಡಸ್ಟ್ರಿಯಲ್ಲಿ ಇರಬೇಕಾಗುತ್ತದೆ. ಸಿಎಂ ಕೂಡ ನಮ್ಮ ಮನವಿನ ಸ್ವೀಕರಿಸಿ ಬೇಡಿಕೆ ಈಡೇರಿಸುತ್ತಾರೆ ಅಂತ ನಂಬಿಕೆ ಇದೆ ಎಂದು ನೀತು ಶೆಟ್ಟಿ ಮಾತನಾಡಿದ್ದಾರೆ.