ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanatara) ಅವರು ಸದ್ಯ ತಮ್ಮ ಅವಳಿ (Twins) ಮಕ್ಕಳ ಆರೈಕೆಯಲ್ಲಿ ಬ್ಯುಸಿಯಿದ್ದಾರೆ. ಈ ನಡುವೆ ನಟಿ ಮಕ್ಕಳ ಜೊತೆ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ಈ ಕುರಿತ ಫೋಟೋವನ್ನ ನಿರ್ದೇಶಕ ವಿಘ್ನೇಶ್ ಶಿವನ್ ಹಂಚಿಕೊಂಡಿದ್ದಾರೆ.
ನಯನತಾರಾ- ವಿಘ್ನೇಶ್ ಶಿವನ್ ಜೋಡಿ ಜೂನ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನ ಪಡೆದುಕೊಂಡರು. ಇತ್ತೀಚಿಗೆ ನಟಿ ಮಕ್ಕಳ ಹೆಸರನ್ನ ಕೂಡ ರಿವೀಲ್ ಮಾಡಿದ್ದರು. ಮೊದಲ ಮಗನ ಹೆಸರು ಉಯಿರ್ ರುದ್ರೋನೀಲ್ ಎನ್.ಶಿವನ್ ಮತ್ತು 2ನೇ ಮಗನ ಹೆಸರು ಉಳಗ್ ದೇವಗನ್ ಎನ್.ಶಿವನ್ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ:ಲೂಸಿಯಾ ಪವನ್ ನಿರ್ದೇಶನದ ‘ಧೂಮಂ’ ಚಿತ್ರದಲ್ಲಿ ‘ಕೆಜಿಎಫ್’ ರಾಕಿಭಾಯ್ : ಟ್ರೈಲರ್ ರಿಲೀಸ್
ಸದ್ಯ ಮಕ್ಕಳ ಜೊತೆ ನಟಿ ನಯನತಾರಾ ಮುದ್ದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಚೆಂದದ ಫೋಟೋವನ್ನ ನಿರ್ದೇಶಕ ವಿಘ್ನೇಶ್ ಶಿವನ್ ಶೇರ್ ಮಾಡಿದ್ದಾರೆ. ನಯನತಾರಾ ಜೊತೆಗಿನ ದಾಂಪತ್ಯಕ್ಕೆ ಒಂದು ವರ್ಷ ತುಂಬಿದ ಸಂತಸದಲ್ಲಿ ನಯನತಾರಾ ಪತಿ ಫೋಟೋಸ್ ಹಂಚಿಕೊಂಡಿದ್ದಾರೆ. ಜೀವನದಲ್ಲಿ ಅದೆಷ್ಟೇ ಕಷ್ಟಗಳಿದ್ದರೂ ಮಕ್ಕಳ ಮುಖ ನೋಡಿದಾಗ ಮತ್ತಷ್ಟು ಎನರ್ಜಿ ಬರುತ್ತದೆ. ಖುಷಿಯಾಗುತ್ತದೆ ಎಂದು ನಿರ್ದೇಶಕ ಬರೆದುಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಸದ್ಯ ನಯನತಾರಾ ‘ಜವಾನ್’ (Jawaan) ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಖಾನ್ (Sharukh Khan) ಜೊತೆ ನಟಿ ರೊಮ್ಯಾನ್ಸ್ ಮಾಡಿದ್ದಾರೆ. ಸದ್ಯದಲ್ಲೇ ಈ ಚಿತ್ರ ತೆರೆಗೆ ಬರಲಿದೆ.