CinemaLatestMain PostNationalSouth cinema

ಮರದ ಜೊತೆ ನಟಿ ನಯನತಾರಾ ಮದುವೆ

ಹೈದರಾಬಾದ್: ಸಿನಿಮಾ ಮತ್ತು ಬಾಯ್‍ಫ್ರೆಂಡ್ ವಿಘ್ನೇಶ್ ಶಿವನ್ ಜೊತೆಗೆ ಕಾಣಿಸಿಕೊಳ್ಳುವ ಮೂಲಕವಾಗಿ ನಟಿ ನಯನತಾರಾ ಸುದ್ದಿಯಲ್ಲಿರುತ್ತಿದ್ದರು. ಆದರೆ ಇದೀಗ ಇವರು ಮದುವೇಯ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ.

ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಅವರು ಬಹುಕಾಲದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಶೀಘ್ರವೇ ಇವರ ಮದುವೆ ನಡೆಯಲಿದೆ. ಅಚ್ಚರಿ ಎಂದರೆ, ವಿಘ್ನೇಶ್ ಜತೆ ಮದುವೆ ಆಗುವುದಕ್ಕೂ ಮೊದಲು ಅವರು ಮರವನ್ನು ಮದುವೆ ಆಗಲಿದ್ದಾರಂತೆ.

ವಿಘ್ನೇಶ್ ಶಿವನ್ ಮತ್ತು ನಯನತಾರಾ ನಡುವಿನ ಪ್ರೇಮ್ ಕಹಾನಿ ಗುಟ್ಟಾಗಿ ಉಳಿದಿಲ್ಲ. ಪರಸ್ಪರ ಜೊತೆಯಾಗಿ ಕಾಲ ಕಳೆಯುತ್ತಿರುವ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲವನ್ನೂ ಬಹಿರಂಗ ಪಡಿಸಿದ್ದಾರೆ. ಅವರಿಬ್ಬರ ಮದುವೆ ಪ್ಲ್ಯಾನ್ ಬಗ್ಗೆ ಪದೇಪದೇ ಸುದ್ದಿ ಕೇಳಿಬರುತ್ತಲೇ ಇರುತ್ತದೆ. ಈಗ ಮದುವೆ ಬಗ್ಗೆ ಅಚ್ಚರಿಯ ಸುದ್ದಿ ಕೇಳಿ ಬಂದಿದೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

ನಯನತಾರಾ ಹಾಗೂ ವಿಘ್ನೇಶ್ ಜ್ಯೋತಿಷ್ಯವನ್ನು ಹೆಚ್ಚು ನಂಬುತ್ತಾರೆ. ಈ ಕಾರಣಕ್ಕೆ ಮದುವೆಗೂ ಮೊದಲು ತಮ್ಮ ಜಾತಕವನ್ನು ಅವರು ತೋರಿಸಿದ್ದಾರೆ. ಇದರಲ್ಲಿ ಕೆಲ ದೋಷಗಳು ಕಂಡಿವೆ. ಈ ಕಾರಣಕ್ಕೆ, ಮೊದಲು ಮರವನ್ನು ಮದುವೆ ಆಗಿ ನಂತರ ವಿಘ್ನೇಶ್ ಅವರನ್ನು ಮದುವೆ ಆಗುವಂತೆ ಜ್ಯೋತಿಷಿಗಳು ಸೂಚಿಸಿದ್ದಾರೆ. ಹಿಂದೂ ಧರ್ಮದ ಪ್ರಕಾರ ಮರ ಅಥವಾ ಪ್ರಾಣಿಯನ್ನು ಮದುವೆ ಆದರೆ ದೋಷ ನಿವಾರಣೆ ಆಗುತ್ತದೆ. ಈ ಕೆಲವರು ಇದನ್ನು ನಂಬುತ್ತಾರೆ. ಅದೇ ರೀತಿ ನಯತಾರಾ ಮತ್ತು ಅವರ ಭಾವಿ ಪತಿ ಕೂಡ ಈ ಶಾಸ್ತ್ರದ ಮೇಲೆ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಅದನ್ನು ಆಚರಿಸೋಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ RSS ವಿರುದ್ಧ ಕಾಂಗ್ರೆಸ್ ಹೇಳಿಕೆ ನೀಡುತ್ತಿದೆ: ಬೊಮ್ಮಾಯಿ

Leave a Reply

Your email address will not be published. Required fields are marked *

Back to top button