ನಟಿ ನಯನತಾರಾ ಅವರು ಯಶ್ (Yash) ನಟನೆಯ ‘ಟಾಕ್ಸಿಕ್’ (Toxic) ಚಿತ್ರದ ಶೂಟಿಂಗ್‌ಗಾಗಿ ಅವಳಿ ಮಕ್ಕಳೊಂದಿಗೆ ಮುಂಬೈಗೆ ಬಂದಿಳಿದಿದ್ದಾರೆ. ಮುಂಬೈ ವಿಮಾನ ನಿಲ್ದಾಣಕ್ಕೆ ನಟಿ ಆಗಮಿಸಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಮುಂಬೈಗೆ ಬಂದಿಳಿದಿರುವ ನಟಿ ಸದ್ಯದಲ್ಲೇ ‘ಟಾಕ್ಸಿಕ್’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಕೆಲ ದಿನಗಳ ಕಾಲ ಮುಂಬೈನಲ್ಲೇ ಅವರು ಬೀಡು ಬಿಡಲಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಕಾಪು ಮಾರಿಗುಡಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ
#Nayanthara arrives in Mumbai to begin shooting for #Toxic alongside #Yash. pic.twitter.com/lt8T7YSuuV
— Amit Karn (@amitkarn99) April 2, 2025
‘ಟಾಕ್ಸಿಕ್’ ಚಿತ್ರದಲ್ಲಿ ನಯನತಾರಾ (Nayanthara) ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ ಎನ್ನಲಾದ ಸುದ್ದಿಯೊಂದು ಕಳೆದ ಕೆಲವು ತಿಂಗಳುಗಳಿಂದ ಚರ್ಚೆಗೆ ಗ್ರಾಸವಾಗಿದೆ. ಆದರೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ನಾಲ್ಕೈದು ದಿನಗಳ ಹಿಂದೆ ಪತ್ನಿ ರಾಧಿಕಾ ಪಂಡಿತ್ ಜೊತೆ ಯಶ್ ಕೂಡ ಟಾಕ್ಸಿಕ್‌ಗಾಗಿ ಮುಂಬೈಗೆ ಬಂದಿದ್ದಾರೆ. ಹಾಗಾಗಿ ನಯನತಾರಾ ಕೂಡ ನಟಿಸಲಿದ್ದಾರೆ ಎಂಬ ಸುದ್ದಿಗೆ ಪುಷ್ಠಿ ಸಿಕ್ಕಂತಾಗಿದೆ. ಇದನ್ನೂ ಓದಿ:ಮದುವೆ ಆದವನೊಂದಿಗೆ ನಾನು ಸುತ್ತಾಡಲ್ಲ- ಜಿ.ವಿ ಪ್ರಕಾಶ್ ಜೊತೆಗಿನ ಡೇಟಿಂಗ್ ಸುದ್ದಿಗೆ ದಿವ್ಯಾ ಪ್ರತಿಕ್ರಿಯೆ
ಯಶ್ ನಟನೆಯ ‘ಟಾಕ್ಸಿಕ್’ ಚಿತ್ರವು ಮುಂದಿನ ವರ್ಷ ಮಾ.19ರಂದು ರಿಲೀಸ್ ಆಗಲಿದೆ. ಈ ಸಿನಿಮಾವನ್ನು ಯಶ್ ಜೊತೆ ಸೇರಿ ಕೆವಿಎನ್ ಸಂಸ್ಥೆ ಕೂಡ ನಿರ್ಮಾಣಕ್ಕೆ ಸಾಥ್ ನೀಡಿದೆ. ‘ಟಾಕ್ಸಿಕ್’ಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ.