ಇದು ವೈಯಕ್ತಿಕ ದ್ವೇಷ: ಧನುಷ್ ವಿರುದ್ಧ ನಯನತಾರಾ ಗರಂ

Public TV
2 Min Read
nayanthara

ಕಾಲಿವುಡ್ ನಟಿ ನಯನತಾರಾ (Nayanthara) ಅವರು ಧನುಷ್‌ಗೆ (Dhanush) ಬಹಿರಂಗವಾಗಿ ಪತ್ರ ಬರೆದಿದ್ದಾರೆ. ನಯನತಾರಾ ಮದುವೆಯ ಸಾಕ್ಷ್ಯಚಿತ್ರಕ್ಕೆ ‘ನಾನುಮ್ ರೌಡಿ ಧಾನ್’ ಚಿತ್ರದ ಒಂದಷ್ಟು ಕ್ಲಿಪ್ ಬಳಸಿದ್ದಕ್ಕೆ ಧನುಷ್ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಈ ಬೆನ್ನಲ್ಲೇ ನಟಿ, ಧನುಷ್‌ಗೆ ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ:ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಅಮಿತಾಭ್ ಬಚ್ಚನ್‌ಗೆ ಆಹ್ವಾನ

nayanthara 1

ನಯನತಾರಾ ನಟನೆಯ ‘ನಾನುಮ್ ರೌಡಿ ಧಾನ್’ (Naanum Rowdy Dhaan) ಚಿತ್ರಕ್ಕೆ ಧನುಷ್ ನಿರ್ಮಾಪಕರಾಗಿದ್ದರು. ಈ ಚಿತ್ರದ ಕೆಲವು ಕ್ಲಿಪ್‌ಗಳನ್ನ‌ ನಯನತಾರಾ ಮದುವೆಯ ಸಾಕ್ಷ್ಯಚಿತ್ರದಲ್ಲಿ ಬಳಸಿಕೊಳ್ಳಲು ಪ್ಲ್ಯಾನ್ ಮಾಡಲಾಗಿತ್ತು. ಇದಕ್ಕೆ ಧನುಷ್ ಆಕ್ಷೇಪ ವ್ಯಕ್ತಪಡಿಸಿದರು. ನೆಟ್‌ಫ್ಲಿಕ್ಸ್‌ಗಾಗಿಯೇ ಮಾಡಿರೋ ಈ ಸಾಕ್ಷ್ಯಚಿತ್ರದಲ್ಲಿ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್ ರಿಲೀಸ್ ಆದ್ಮೇಲೆ ಧನುಷ್ ಅವರಿಂದ ನಟಿಗೆ ಲೀಗಲ್ ನೋಟಿಸ್ ಬಂದಿದೆ. ಸಾಕ್ಷ್ಯಚಿತ್ರದಲ್ಲಿ 3 ಸೆಕೆಂಡ್ ವಿಡಿಯೋ ಬಳಸಿದ್ದಕ್ಕೆ 10 ಕೋಟಿ ಡ್ಯಾಮೇಜ್ ಕ್ಲೇಮ್ ಮಾಡಲಾಗಿದೆ ಎಂದು ನಯನತಾರಾ ಲೆಟರ್‌ನಲ್ಲಿ ಬರೆದುಕೊಂಡಿದ್ದಾರೆ.

dhanush 1ನನ್ನ ಈ ಸಾಕ್ಷ್ಯಚಿತ್ರಕ್ಕೆ ನಿಮ್ಮ ಚಿತ್ರದ ಕೆಲವು ಕ್ಲಿಪ್ಸ್ ಬಳಸಿಕೊಳ್ಳುತ್ತೇವೆ ಎಂದು 2 ವರ್ಷಗಳ ಹಿಂದೆಯೇ NOC ಕೂಡ ಕೇಳಿದ್ದೇವು. NOC ಕೊಡದ ನೀವು ಇದೀಗ ಟ್ರೈಲರ್ ರಿಲೀಸ್ ಆದ್ಮೇಲೆ ಲೀಗಲ್ ನೋಟಿಸ್ ಕಳಿಸೋದು ಎಷ್ಟು ಸರಿ ಹೇಳಿ? ಎಂದು ನಟಿ ಪ್ರಶ್ನಿಸಿದ್ದಾರೆ. ಇದು ವೈಯಕ್ತಿಕ ದ್ವೇಷ ಎಂದು ನಟಿ ಹೇಳಿದ್ದಾರೆ.

ನಿಮ್ಮ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ಆದರೆ, ಅವರು ತಿಳಿದುಕೊಂಡಿರುವ ಹಾಗೆ ಅರ್ಧದಷ್ಟು ರಿಯಲ್ ಆಗಿ ನೀವು ಇಲ್ವೇ ಇಲ್ಲ. ನಿಜಕ್ಕೂ ನಿಮ್ಮ ಈ ನಡೆ ತುಂಬಾನೇ ಬೇಸರ ತರಿಸಿದೆ ಅಂತಲೇ ನಯನತಾರಾ ಹೇಳಿಕೊಂಡಿದ್ದಾರೆ. ಧನುಷ್‌ ಲೀಗಲ್‌ ನೋಟಿಸ್‌ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ರಿಯಾಕ್ಟ್‌ ಮಾಡಿದ್ದಾರೆ.

nayanthara

ಅಂದಹಾಗೆ, ‘ನಾನುಮ್ ರೌಡಿ ಧಾನ್’ ಚಿತ್ರದಲ್ಲಿ ವಿಜಯ್ ಸೇತುಪತಿಗೆ ನಯನತಾರಾ ನಾಯಕಿಯಾದರು. ಈ ಚಿತ್ರವನ್ನು ವಿಘ್ನೇಶ್ ಶಿವನ್ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ನಟ ಧನುಷ್ ಬಂಡವಾಳ ಹೂಡಿದ್ದರು. ಈ ಸಿನಿಮಾ ಸಂದರ್ಭದಲ್ಲಿಯೇ ನಯನತಾರಾ ಮತ್ತು ವಿಘ್ನೇಶ್‌ಗೆ ಪ್ರೇಮಾಂಕುರವಾಗಿತ್ತು.

Share This Article