ಕಾಲಿವುಡ್ ನಟಿ ನಯನತಾರಾ (Nayanathara) ಮತ್ತು ವಿಘ್ನೇಶ್ ಶಿವನ್ (Vignesh Shivan) ದಾಂಪತ್ಯದಲ್ಲಿ (Wedding) ಬಿರುಕಾಗಿದೆ ಎಂಬ ಸುದ್ದಿ ಬೆನ್ನಲ್ಲೇ ಈ ಜೋಡಿ ಸೌದಿ ಅರೇಬಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೋಡಿಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ರಾಕಿಂಗ್ ಸ್ಟಾರ್ ಯಶ್ ಹೊಸ ಲುಕ್: ರಾಕಿಭಾಯ್ ಫ್ಯಾನ್ಸ್ ಫಿದಾ
Advertisement
ಕೆಲ ದಿನಗಳಿಂದ ನಯನತಾರಾ ದಾಂಪತ್ಯದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಇಬ್ಬರ ನಡುವೆ ಬಾಂಧವ್ಯ ಸರಿ ಇಲ್ಲ ಎನ್ನಲಾಗಿತ್ತು. ನಯನತಾರಾ ರಿಯಾಕ್ಷನ್ ಬೆನ್ನಲ್ಲೇ ಇದೀಗ ಪತ್ನಿ ಜೊತೆ ವಿಘ್ನೇಶ್ ಶಿವನ್ ಕಾಲ ಕಳೆಯುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.
Advertisement
Advertisement
ಇಬ್ಬರು ಅವಳಿ ಮಕ್ಕಳನ್ನು ನಯನತಾರಾ ಕಾರಿನೊಳಗೆ ಮುದ್ದಿಸುತ್ತಿರುವ ಫೋಟೋವನ್ನು ವಿಘ್ನೇಶ್ ಶಿವನ್ ಶೇರ್ ಮಾಡಿದ್ದಾರೆ. ಈ ಮೂಲಕ ತಮ್ಮ ದಾಂಪತ್ಯ ಜೀವನ ಚೆನ್ನಾಗಿಯೇ ಇದೆ ಎಂದು ತಿಳಿಸಿಕೊಟ್ಟಿದ್ದಾರೆ. ನಯನತಾರಾ ಡಿವೋರ್ಸ್ ಸುದ್ದಿ ಸುಳ್ಳು ಎಂದು ಕ್ಲ್ಯಾರಿಟಿ ಸಿಕ್ಕಿದಕ್ಕೆ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.
Advertisement
ಡಿವೋರ್ಸ್ ವಿಚಾರ ಗಾಸಿಪ್ ಪ್ರೀತಿಯ ಚರ್ಚೆಗೆ ಗ್ರಾಸವಾದಾಗ ಸತ್ಯ ಅಥವಾ ಸುಳ್ಳು ಅಂತಾನೂ ಸ್ಪಷ್ಟ ಪಡಿಸಲಿಲ್ಲ. ಮೊನ್ನೆಯಷ್ಟೇ ನಯನತಾರಾ ಹಾರ್ಟ್ ಸಿಂಬಲ್ ಹಾಕಿ, ಅಭಿಮಾನಿಗಳ ಹಾರ್ಟ್ ಬಿಟ್ ಹೆಚ್ಚಿಸಿದ್ದರು. ಇದನ್ನೂ ಓದಿ:‘ಕೆಂಡ’ ಚಿತ್ರದ ಆಡಿಯೋ ರೈಟ್ಸ್ ಡಿ ಬೀಟ್ಸ್ ತೆಕ್ಕೆಗೆ
ಕೊಳಲು ವಾದಕ ನವೀನ್ ಎನ್ನುವವರು ತಾವು ಕೊಳಲು ನುಡಿಸುತ್ತಿರುವ ಮತ್ತು ಅದನ್ನು ತನ್ಮತೆಯಿಂದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಕೇಳುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋವನ್ನು ನಯನತಾರಾ ಶೇರ್ ಮಾಡುವ ಮೂಲಕ ಹಾರ್ಟ್ ಸಿಂಬಲ್ ಹಾಕಿದ್ದರು. ಅಲ್ಲಿಗೆ ತಮ್ಮ ಜೀವನದಲ್ಲಿ ಯಾವುದೇ ಡಿವೋರ್ಸ್ ಬಿರುಗಾಳಿ ಎದ್ದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದರು.
ತಮಿಳಿನ ಬೆಸ್ಟ್ ಕಪಲ್ ಆಗಿ ಹೈಲೆಟ್ ಆಗಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಬಾಳಲ್ಲಿ ಬಿರುಗಾಳಿ ಬೀಸಿದ್ಯಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡಿತ್ತು. ನಟಿ ನಯನತಾರಾ ಅವರು ಪತಿ ವಿಘ್ನೇಶ್ರನ್ನು ಇನ್ಸ್ಟಾಗ್ರಾಂನಲ್ಲಿ ಅನ್ಫಾಲೋ ಮಾಡಿದ್ದರಿಂದ ಇಂಥದ್ದೊಂದು ಪ್ರಶ್ನೆ ಮೂಡಿತ್ತು.
ಪತ್ನಿಯನ್ನು ವಿಘ್ನೇಶ್ ಫಾಲೋ ಮಾಡ್ತಿದ್ದಾರೆ. ಆದರೆ ನಯನತಾರಾ ಅನ್ಫಾಲೋ ಮಾಡಿ ಫುಲ್ ಸೈಲೆಂಟ್ ಆಗಿದ್ದರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ನಟಿ ಅಳಲು ತೋಡಿಕೊಂಡಿದ್ದರು. ಕಣ್ಣಲ್ಲಿ ನೀರು ಬರುತ್ತಿದ್ದರೂ ಇದು ನನಗೆ ಸಿಕ್ಕಿತು ಎಂದು ಬರೆದುಕೊಂಡಿದ್ದರು. ಇಬ್ಬರ ನಡುವೆ ಇದೀಗ ಬಿರುಕು ಮೂಡಿದೆ ಎನ್ನಲಾಗುತ್ತಿತ್ತು. ಡಿವೋರ್ಸ್ಗೆ ಈ ಜೋಡಿ ಮುಂದಾಗಿದೆ ಎಂದೇ ಹೇಳಲಾಗುತ್ತಿತ್ತು.
ಹಲವು ವರ್ಷಗಳು ಪ್ರೀತಿಸಿ, ಕಳೆದ ವರ್ಷ ಜೂನ್ನಲ್ಲಿ ನಯನತಾರಾ- ವಿಘ್ನೇಶ್ ಶಿವನ್ ಅದ್ಧೂರಿಯಾಗಿ ಮದುವೆಯಾದರು. ಬಳಿಕ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದರು. ಖುಷಿ ಖುಷಿಯಿಂದ ಬದುಕುತ್ತಿದ್ದ ಈ ಜೋಡಿ ಈಗ ಬೇರೇ ಆಗ್ತಾರೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದ್ದಂತೆ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದರು. ಇದೀಗ ಎಲ್ಲದಕ್ಕೂ ಸುಖಾಂತ್ಯವಾಗಿದೆ.