ಪಾಪ ಪಾಂಡು, ಗಿಣಿರಾಮ (Giniram Serial) ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ನಟಿ ನಯನಾ ನಾಗರಾಜ್ (Nayana Nagaraj) ಜೂನ್ 16ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯನ ಜೊತೆ ನಟಿ ಮದುವೆಯಾಗಿದ್ದಾರೆ.
View this post on Instagram
ಗೆಳೆಯ ಸುಹಾಸ್ ಶಿವಣ್ಣ ಜೊತೆ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಯನಾ ಮದುವೆಯಾಗಿದ್ದಾರೆ. ಈ ಮದುವೆಗೆ ನಟಿ ಚಂದನಾ ಅನಂತಕೃಷ್ಣ, ಸಿಹಿ ಕಹಿ ಚಂದ್ರು ಫ್ಯಾಮಿಲಿ, `ಗಿಣಿರಾಮ’ ಹೀರೋ ರಿತ್ವಿಕ್ ದಂಪತಿ ಆಗಮಿಸಿ ಹೊಸ ಜೋಡಿಗೆ ಶುಭಕೋರಿದ್ದಾರೆ. ಇದನ್ನೂ ಓದಿ:ಹಾಸನದಲ್ಲಿ ಕಾಣಿಸಿಕೊಂಡ ನೀಲಿ ತಾರೆ- ಶೂಟಿಂಗ್‌ನಲ್ಲಿ ಸನ್ನಿ ಲಿಯೋನ್ ಭಾಗಿ
ಇತ್ತೀಚೆಗೆ ‘ಲಕ್ಷ್ಮಿ ನಿವಾಸ’ ನಟಿ ಚಂದನಾ ಅನಂತಕೃಷ್ಣ (Chandana Ananathakrishna) ಅವರು ಬ್ಯಾಚುಲರ್ ಪಾರ್ಟಿ ಮಾಡಿ ಸಂಭ್ರಮಿಸಿದ್ದರು.
ಇದೀಗ ಮದುವೆಯಾಗಿರುವ ‘ಗಿಣಿರಾಮ’ ನಟಿಗೆ ಕಿರುತೆರೆ ನಟಿಯರು, ಅಭಿಮಾನಿಗಳು ಸೇರಿದಂತೆ ಹಲವರು ಶುಭಹಾರೈಸಿದ್ದಾರೆ.