ನಟಿ ನವ್ಯಾ ನಾಯರ್ ‘ಇಡಿ’ ಸಂಕಷ್ಟ: ಎಫ್.ಐ.ಆರ್ ದಾಖಲು ಸಾಧ್ಯತೆ

Public TV
2 Min Read
navya nair 3

ಕ್ಷಿಣ ಭಾರತದ ಖ್ಯಾತ ನಟಿ ನವ್ಯಾ ನಾಯರ್ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕ್ರಮ ಹಣ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಕಂದಾಯ ಅಧಿಕಾರಿ ಜೊತೆ ಇವರು ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಕಂದಾಯ ಅಧಿಕಾರಿ ಕೊಟ್ಟ ಗಿಫ್ಟ್ ಅನ್ನು ಇವರು ಸ್ವೀಕರಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಸದ್ಯದಲ್ಲೇ ನವ್ಯಾ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

navya nair 2

ಮನಿಲ್ಯಾಂಡರಿಂಗ್ (Money Laundering) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನವಾಗಿರುವ (Arrest) ಐ.ಆರ್.ಎಸ್ ಅಧಿಕಾರಿ ಸಚಿನ್ ಸಾವಂತ್ (Sachin Sawant) ಜೊತೆ ಮಲಯಾಳಂ ಖ್ಯಾತ ನಟಿ ನವ್ಯಾ ನಾಯರ್ (Navya Nair) ಸ್ನೇಹ ಹೊಂದಿದ್ದರು ಎನ್ನುವ ಅಂಶ ತನಿಖೆಯಲ್ಲಿ ಬಯಲಾಗಿದೆ. ಈ ಸ್ನೇಹಕ್ಕಾಗಿ ನವ್ಯಾ ಅವರಿಗೆ ಭಾರೀ ಮೊತ್ತದ ಉಡುಗೊರೆಯನ್ನೇ ಸಚಿನ್ ನೀಡಿದ್ದರು ಎಂದು ಹೇಳಲಾಗುತ್ತಿದೆ.

navya nair 1

ತನಿಖೆಯ ವೇಳೆ ನಟಿ ನವ್ಯಾ ನಾಯರ್ ಅವರಿಗೆ ಅಧಿಕಾರಿ ಸಚಿನ್ ಅವರು ಚಿನ್ನದ ಉಡುಗೊರೆ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದು, ಇಡಿ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ನವ್ಯಾ ಅವರನ್ನು ಮುಂಬೈಗೆ ಕರೆಯಿಸಿಕೊಂಡು ವಿಚಾರಣೆ ಮಾಡಿದ್ದಾರೆ. ನಟಿಯ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ.

navya nair 2

ನವ್ಯಾ ಭೇಟಿಗಾಗಿ ಸಚಿನ್ ಹಲವು ಬಾರಿ ಕೊಚ್ಚಿನ್ ಗೂ ಹೋಗಿದ್ದರು ಎಂದು ತನಿಖೆಯಿಂದ ಬಯಲಾಗಿದೆ. ತನಿಖೆ ವೇಳೆ ಅಧಿಕಾರಿಯ ಮೊಬೈಲ್, ವಾಟ್ಸಪ್ ಡೇಟಾ ಪರಿಶೀಲಿಸಿದಾಗ ಇವೆಲ್ಲವೂ ಪತ್ತೆ ಆಗಿವೆ. ಈ ಕುರಿತು ನವ್ಯಾ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದು, ನಾವಿಬ್ಬರೂ ಸ್ನೇಹಿತರು ಅಷ್ಟೇ. ಅದರಾಚೆ ಬೇರೆ ಏನೂ ಇಲ್ಲ ಎಂದು ಹೇಳಿದ್ದಾರಂತೆ. ಸ್ನೇಹದ ಸಂಕೇತವಾಗಿ ಚಿನ್ನದ ಉಡುಗೊರೆ ಕೊಟ್ಟಿದ್ದು ನಿಜವೆಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

 

ಸಚಿನ್ ಮತ್ತು ನವ್ಯಾ ನೆರೆಹೊರೆಯವರು ಅನ್ನುವ ಕಾರಣಕ್ಕಾಗಿ ಪರಿಚಯವಾಗಿತ್ತು. ಈ ಅಧಿಕಾರಿಯು ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿದಾಗ, ನವ್ಯಾ ಅವರಿಗೆ ಭೇಟಿಯ ವ್ಯವಸ್ಥೆ ಮಾಡಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article