ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ (Nusrat Jahan) ಇಂದು ಇಡಿ (ED) ಅಧಿಕಾರಿಗಳ ಮುಂದೆ ಹಾಜರಾದರು. ಹಿರಿ ಜೀವಗಳಿಗೆ ಫ್ಲ್ಯಾಟ್ ಕೊಡಿಸುವುದಾಗಿ ಹೇಳಿ ಕೋಟ್ಯಾಂತರ ರೂಪಾಯಿಯನ್ನು ವಂಚಿಸಿದ್ದಾರೆ ಎಂದು ಅವರ ಮೇಲೆ ದೂರು ದಾಖಲಾಗಿತ್ತು. ಹಾಗಾಗಿ ಇಂದು ವಿಚಾರಣೆಗೆ ನುಸ್ರತ್ ಹಾಜರಾಗಿದ್ದಾರೆ.
ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ನ ಪ್ರಭಾವಿ ರಾಜಕಾರಣಿ ಹಾಗೂ ಸಂಸೆಯೂ ಆಗಿರುವ ನುಸ್ರತ್ ಜಹಾನ್, ಫ್ಲ್ಯಾಟ್ ಕೊಡಿಸುವುದಾಗಿ ಹೇಳಿ ಅಕ್ರಮವಾಗಿ ಹಣ ಪಡೆದುಕೊಂಡಿದ್ದಾರೆ ಎನ್ನುವ ಆರೋಪವನ್ನು ಎದುರಿಸುತ್ತಿದ್ದಾರೆ.
ಇಡಿಯಿಂದ ನೋಟಿಸ್ ಪಡೆದುಕೊಂಡಿದ್ದ ನುಸ್ರತ್ ಸಾಲ್ಟೆಲೇಕ್ ನಲ್ಲಿರುವ ಸಿಜಿಓ ಆಫೀಸಿಗೆ ಇಂದು ಹಾಜರಾಗಿದ್ದರು. ಇಡಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ರಿಯಲ್ ಎಸ್ಟೇಟ್ ಕಂಪನಿಯೊಂದರ ನಿರ್ದೇಶಕಿಯಾಗಿರುವ ನುಸ್ರತ್, ಆ ಕಂಪನಿಯು ಫ್ಲ್ಯಾಟ್ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಯಶ್ 19 ಚಿತ್ರಕ್ಕೆ ಸಂಯುಕ್ತಾ ಮೆನನ್ ನಾಯಕಿ: ಈ ತಿಂಗಳಲ್ಲೇ ಘೋಷಣೆ?
ಪಶ್ಚಿಮ ಬಂಗಾಳದ (West Bengal) ಬಸಿರಹತ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಭಾರೀ ಅಂತರದಿಂದಲೇ ಗೆಲುವು ಸಾಧಿಸಿರುವ ನುಸ್ರತ್, ಈ ಹಿಂದೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ಜಾಹೀರಾತುಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ.
ನುಸ್ರತ್ ಅವರನ್ನು ಇಡಿ ವಿಚಾರಣೆಗೆ ಕರೆಯುತ್ತಿದ್ದಂತೆಯೇ ವಿರೋಧ ಪಕ್ಷಗಳು ಭಾರೀ ಗಲಾಟೆ ಎಬ್ಬಿಸಿವೆ. ಕೂಡಲೇ ಅವರನ್ನು ಬಂಧಿಸುವಂತೆ ಒತ್ತಾಯ ಕೂಡ ಮಾಡಲಾಗುತ್ತಿದೆ. ಎಷ್ಟೇ ಪ್ರಭಾವಿ ಆಗಿದ್ದರೂ, ಅವರನ್ನು ಬಿಡಬೇಡಿ ಎಂದು ಹಲವರು ಒತ್ತಾಯ ಮಾಡಿದ್ದಾರೆ.
Web Stories