ಬದುಕೇ ಬೇಡ ಎಂದು ಕುಗ್ಗಿದ ದಿನಗಳ ಬಗ್ಗೆ ‘ಕೆಜಿಎಫ್’ ನಟಿ ಓಪನ್ ಟಾಕ್

Public TV
1 Min Read
FotoJet 1 22

ಬಾಲಿವುಡ್ ಬೆಡಗಿ ಮೌನಿ ರಾಯ್ (Mouni Roy) ವೈವಾಹಿಕ ಜೀವನ ಮತ್ತು ಸಿನಿಮಾ ಚಿತ್ರೀಕರಣ ಎಂದು ಎರಡನ್ನು ನಿಭಾಯಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಅನಾರೋಗ್ಯ ಸಮಸ್ಯೆಯಿಂದ ಬಳಲಿದ್ದರ ಬಗ್ಗೆ ನಟಿ ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದಾರೆ.

mouni roy 2

‘ನಾಗಿನ್’ (Naagin) ಸೀರಿಯಲ್‌ಗೆ ಮಾಡುವ ಮುನ್ನ ‘ಝಲಕ್ ದಿಖ್ಲಾ ಜಾ’ ಡ್ಯಾನ್ಸ್ ಶೋನಲ್ಲಿ ಮೌನಿ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಬೆನ್ನು ಮೂಳೆಯ ಮೇಲೆ ಸಂಪೂರ್ಣ ಎಲ್‌4-ಎಲ್‌5 ಸ್ಲಿಪ್ ಡಿಜೆನರೇಶನ್ ಮತ್ತು ಸ್ಕೋಲಿಯೋಸಿಸ್ ಉಂಟಾಗಿತ್ತು. ಇದರ ಪರಿಣಾಮ, ನೇರವಾಗಿ ನಿಲ್ಲಲು ಮೌನಿಗೆ ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕೆ ದಿನವೊಂದಕ್ಕೆ 30 ಮಾತ್ರೆ ತೆಗೆದುಕೊಳ್ಳಬೇಕಾದ ಸಂದರ್ಭ ಎದುರಾಗಿತ್ತು ಎಂದು ಮೌನಿ ಮಾತನಾಡಿದ್ದಾರೆ.

MOUNI ROY

ಚುಚ್ಚು ಮದ್ದು ಬುದಕಿನ ಪ್ರಮುಖ ಭಾಗವೂ ಆಯಿತು. ಇದೆಲ್ಲದರಿಂದ ನೊಂದು-ಬೆಂದು ಹೋಗಿದ್ದ ಮೌನಿ ರಾಯ್ ಅವರ ತೂಕ ಹೆಚ್ಚಾಗಿ ಬಿಟ್ಟಿತ್ತು. ಈ ದೈಹಿಕ ಸಮಸ್ಯೆ ಮೌನಿ ಅವರನ್ನ ಮಾನಸಿಕವಾಗಿ ಸಂಪೂರ್ಣ ಕುಗ್ಗಿಸಿತ್ತು. ಇದರಿಂದ 3 ತಿಂಗಳು ಹಾಸಿಗೆ ಹಿಡಿದಿದ್ದರು ಎಂದು ಮೌನಿ ಹೇಳಿದ್ದಾರೆ. ಇದನ್ನೂ ಓದಿ:ಕಂಗನಾ ಮನಸ್ಥಿತಿ ಬಿಚ್ಚಿಟ್ಟ ನಟಿ ಸ್ವರಾ ಭಾಸ್ಕರ್

ಕೊಂಚ ಗುಣಮುಖರಾದ ಮೇಲೆ ‘ನಾಗಿನ್’ ಸೀರಿಯಲ್ ಒಪ್ಪಿ ಮೌನಿ ನಟಿಸಿದ್ದರು. ಈ ಸೀರಿಯಲ್ ಭಾರೀ ಜನಪ್ರಿಯತೆ ಪಡೆಯಿತು. ‘ಗೋಲ್ಡ್’ (Gold) ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಮೌನಿ ರಾಯ್ (Mouni Roy) ನಟಿಸಿದ್ದರು. ‘ಕೆಜಿಎಫ್‌’ (KGF) ಸಿನಿಮಾದಲ್ಲಿ ಸ್ಪೆಷಲ್‌ ಸಾಂಗ್‌ಗೆ ಯಶ್‌ ಜೊತೆ ಹೆಜ್ಜೆ ಹಾಕಿದ್ದರು.

Share This Article