ಬಿಗ್ ಬಾಸ್ ಮನೆಯಲ್ಲಿ (Bigg Boss Kannada 11) ನಾಮಿನೇಷನ್ ಕಿಡಿ ಹೊತ್ತುಕೊಂಡಿದೆ. ಪ್ರತಿವಾರದಂತೆ ಈ ವಾರವೂ ವಿಭಿನ್ನವಾಗಿ ನೇರವಾಗಿ ನಾಮಿನೇಷನ್ ಟಾಸ್ಕ್ ನೀಡಲಾಗಿದೆ. ಈ ವೇಳೆ, ಬಾಟಲಿ ತೆಗೆದು ಮಂಜು ತಲೆಗೆ ಹೊಡೆದು ವಿಭಿನ್ನವಾಗಿ ಮೋಕ್ಷಿತಾ ನಾಮಿನೇಟ್ ಮಾಡಿದ್ದಾರೆ. ಇದನ್ನೂ ಓದಿ:ಚಿತ್ರರಂಗದ ವರ್ತನೆಗೆ ಆಕ್ಷೇಪ- ತೆಲುಗು ನಟರ ಕಿವಿ ಹಿಂಡಿದ ಸಿಎಂ ರೇವಂತ್ ರೆಡ್ಡಿ
ಸ್ಪರ್ಧಿಗಳು ಮನೆಯಿಂದ ಆಚೆ ಕಳುಹಿಸಲು ಇಷ್ಟ ಪಡುವ ಸ್ಪರ್ಧಿಗಳ ತಲೆ ಮೇಲೆ ಬಾಟಲಿಯಿಂದ ಹೊಡೆದು ನಾಮಿನೇಟ್ ಮಾಡಬೇಕು ಎಂದು ‘ಬಿಗ್ ಬಾಸ್’ ಸೂಚಿಸಿದರು. ಅದರಂತೆಯೇ ಭವ್ಯಾ ಅವರು, ಐಶ್ವರ್ಯಾ (Aishwarya) ತಲೆಗೆ ಬಾಟಲಿಯಲ್ಲಿ ಹೊಡೆದಿದ್ದಾರೆ. ಬಳಿಕ ಮೋಕ್ಷಿತಾ ಉಗ್ರಂ ಮಂಜು (Ugramm Manju) ತಲೆಗೆ ಬಾಟಲಿಯಿಂದ ಹೊಡೆದಿದ್ದಾರೆ. ಈ ವೇಳೆ, ಇಬ್ಬರ ನಡುವೆ ವಾಕ್ಸಮರ ನಡೆದಿದೆ.
ನೀವು ಮನೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಕಾರಣ ನೀಡಿ ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ರೊಚ್ಚಿಗೇಳುವ ಮಂಜು, ನಾಳೆಯಿಂದ ಈ ಮನೆಯಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಎಂದು ನಿಮ್ಮ ಬಳಿ ಟ್ಯೂಷನ್‌ಗೆ ಬರುತ್ತೇನೆ ಎಂದಿದ್ದಾರೆ. ನಿಮಗೆ ನಾನು ಕಾಣಿಸಿಕೊಳ್ಳಲು ಏನಾದರೂ ತಂದುಕೊಡಬೇಕಾ ಎಂದು ಮೋಕ್ಷಿತಾ ಮೇಲೆ ಕೆಂಡ ಕಾರಿದ್ದಾರೆ.
ಆಗ ಕೆರಳಿದ ಮೋಕ್ಷಿತಾ, ನನಗೆ ಅನಿಸಿದ್ದನ್ನು ನಾನು ಹೇಳಿದ್ದೀನಿ. ನೀವು ಯಾರು ನನಗೆ ವೈಸ್ ರೈಸ್ ಮಾಡೋಕೆ ಎಂದು ತಿರುಗೇಟು ನೀಡಿದ್ದಾರೆ. ಕ್ಷುಲ್ಲಕ ಕಾರಣಗಳಿಗೆ ನಾನು ನಾಮಿನೇಟ್ ಆಗಲ್ಲ ಎಂದ ಮಂಜುಗೆ, ನಿಮ್ಮನ್ನು ನಾಮಿನೇಟ್ ಮಾಡೋದು ನನ್ನಿಷ್ಟ. ಇದು ನನ್ನ ನಿರ್ಧಾರ ಎಂದು ಬಾಟಲಿಯಿಂದ ಮಂಜು ತಲೆಗೆ ಮೋಕ್ಷಿತಾ (Mokshitha Pai) ಹೊಡೆದಿದ್ದಾರೆ. ಇಬ್ಬರ ಕಿರಿಕ್ ನೋಡಿ ಮನೆ ಮಂದಿ ಸೈಲೆಂಟ್ ಆಗಿದ್ದಾರೆ.