ಮಹಿಳಾ ದಿನಾಚರಣೆ ದಿನದಂದು ಗುಡ್ ನ್ಯೂಸ್ ಕೊಟ್ಟ ನಟಿ ಮಿಲನಾ

Public TV
1 Min Read
milana nagaraj with darling krishna 1

ಟಿ ಮಿಲನಾ ನಾಗರಾಜ್ (Milana Nagaraj) ಮಹಿಳಾ ದಿನಾಚರಣೆ ದಿನದಂದು ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ತಾವು ತಾಯಿ ಆಗುತ್ತಿರುವ ವಿಚಾರವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ ನಲ್ಲಿ ತಮ್ಮ ಮನೆಗೆ ಹೊಸ ಅತಿಥಿ ಬರುತ್ತಿರುವುದಾಗಿ ಬರೆದುಕೊಂಡಿದ್ದಾರೆ.

milana nagaraj with darling krishna 2

ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ (Darling Krishna) ಸಿನಿಮಾ ರಂಗದ ಅಪರೂಪದ ಜೋಡಿ. ಒಟ್ಟಿಗೆ ಸಿನಿಮಾದಲ್ಲಿ ನಟಿಸುತ್ತಲೇ ಪ್ರೀತಿಗೆ ಬಿದ್ದವರು. ಆನಂತರ ಮನೆಯವರ ಒಪ್ಪಿಗೆ ಪಡೆದುಕೊಂಡು ಮದುವೆಯಾದವರು. ಮದುವೆ ನಂತರವೂ ಇಬ್ಬರೂ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದಾರೆ. ಜೊತೆಗೆ ಸಿನಿಮಾದಲ್ಲಿ ನಟನೆ, ನಿರ್ಮಾಣ ಮತ್ತು ನಿರ್ದೇಶನವನ್ನೂ ಮಾಡಿದ್ದಾರೆ.

 

ಇಂಥದ್ದೊಂದು ಜೋಡಿಯು ಈಗ ಹೊಸ ಅತಿಥಿಯ ಆಗಮನಕ್ಕೆ ಕಾಯುತ್ತಿದೆ. ಈ ಖುಷಿಯನ್ನು ಅವರು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ‘ಬೇಬಿ ಕ್ರಿಸ್ಮಿ’ ಎನ್ನುವ ಸುಂದರವಾದ ಪೋಸ್ಟ್ ರೆಡಿ ಮಾಡಿಸಿ ಅದನ್ನು ಮಿಲನಾ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅಭಿಮಾನಿಗಳು ಶುಭ ಹಾರೈಸಿದ್ದಾರೆ.

Share This Article