`ರಾಜಹುಲಿ’ (Rajahuli Actress) ನಟಿ ಮೇಘನಾ ರಾಜ್ (Meghana Raj) ಅವರು ತಮ್ಮ ಸಿನಿಮಾ ಅಪ್‌ಡೇಟ್ ಮೂಲಕ ಈಗಾಗಲೇ ಗುಡ್ ನ್ಯೂಸ್ ನೀಡಿದ್ದಾರೆ. ದಿನ ಕಳೆದಂತೆ ಚಿತ್ರತಂಡ ಹಿರಿದಾಗುತ್ತಿದೆ. ಅನೇಕ ಕಲಾವಿದರು ಸಿನಿಮಾ ತಂಡವನ್ನ ಸೇರಿಕೊಳ್ಳುತ್ತಿದ್ದಾರೆ. ಈಗ `ಕಿರಿಕ್ ಪಾರ್ಟಿ’ ಖ್ಯಾತಿಯ ಅರವಿಂದ್ ಅಯ್ಯರ್ ಮತ್ತು ಕಿರುತೆರೆ ನಟಿ ಮಹತಿ ಭಟ್ ಸೇರಿಕೊಳ್ತಿದ್ದಾರೆ.
ಸ್ಯಾಂಡಲ್‌ವುಡ್ (Sandalwood) ನಟಿ ಮೇಘನಾ ರಾಜ್ ಅವರು `ತತ್ಸಮ ತದ್ಭವ’ (Tatsama Tadbhava) ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ. ಕನ್ನಡ-ಮಲಯಾಳಂನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಅನೇಕ ಕಲಾವಿದರು ಚಿತ್ರತಂಡವನ್ನ ಸೇರಿಕೊಳ್ತಿದ್ದಾರೆ. ವಿಶಾಲ್ ಅತ್ರೇಯಾ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದೆ.
View this post on Instagram
`ಕಿರಿಕ್ ಪಾರ್ಟಿ’ (Kirik Party) ಮತ್ತು ಭೀಮಸೇನ ನಳಮಹರಾಜ ಸಿನಿಮಾಗಳ ಮೂಲಕ ಗಮನ ಸೆಳೆದ ಅರವಿಂದ್ ಅವರು ಚಿತ್ರದಲ್ಲಿ ಪ್ರಮುಖ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಮ್ಯಾಥ್ಯೂ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ನೆಟ್ಟಿಗರ ಗಮನ ಸೆಳೆಯುತ್ತಿದೆ.
View this post on Instagram
ಇನ್ನೂ `ಗಟ್ಟಿಮೇಳ’ ಖ್ಯಾತಿಯ ಅಂಜಲಿ ಅಲಿಯಾಸ್ ಮಹತಿ ವೈಷ್ಣವಿ ಭಟ್ ನಟಿಸಿದ್ದಾರೆ. ಮೇಘನಾ ರಾಜ್ ಜೊತೆ ನಿಧಿ ಎಂಬ ಪಾತ್ರದಲ್ಲಿ ನಟಿಸಿ ಬಂದಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಮತ್ತಷ್ಟು ಅಪ್‌ಡೇಟ್ ಸಿಗಲಿದೆ.