‘ಸೀತಾರಾಮ’ ಸೀರಿಯಲ್‌ನಲ್ಲಿ ನಾಯಕಿ ಸೀತಾ ಪಾತ್ರಧಾರಿಯ ಸ್ನೇಹಿತೆಯಾಗಿ ಗಮನ ಸೆಳೆದಿರುವ ಮೇಘನಾ ಶಂಕರಪ್ಪ (Meghana Shankarappa) ಹಸೆಮಣೆ (Wedding) ಏರಲು ಸಜ್ಜಾಗಿದ್ದಾರೆ. ಮದುವೆ ಸಂಭ್ರಮದಲ್ಲಿರುವ ನಟಿ ಸದ್ಯ ಭಾವಿ ಪತಿ ಜೊತೆಗಿನ ಸುಂದರ ಪ್ರಿ ವೆಡ್ಡಿಂಗ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಿರ್ದೇಶನದತ್ತ ರಂಜನಿ ರಾಘವನ್- ಕನ್ನಡತಿಯ ಚಿತ್ರಕ್ಕೆ ಇಳಯರಾಜ ಸಾಥ್
Advertisement
ಹೊಸ ವರ್ಷದಂದು ಭಾವಿ ಪತಿ ಜೊತೆಗಿನ ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡಿದ್ದಾರೆ. ದೇವಸ್ಥಾನವೊಂದರಲ್ಲಿ ವಿಡಿಯೋ ಶೂಟ್ ಮಾಡಿಸಿದ್ದು, ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಬಾದಮಿ ಬಣ್ಣದ ಉಡುಗೆಯಲ್ಲಿ ಇಬ್ಬರೂ ಮಿಂಚಿದ್ದಾರೆ. ಹೊಸ ಜೋಡಿಗೆ ಫ್ಯಾನ್ಸ್ ಶುಭಕೋರಿದ್ದಾರೆ.
Advertisement
View this post on Instagram
Advertisement
ಸಾಫ್ಟ್‌ವೇರ್ ಇಂಜಿನಿಯರ್ ಜಯಂತ್ ಜೊತೆ ನಟಿಯ ಮದುವೆ ಫೆಬ್ರವರಿಯಲ್ಲಿ ಫಿಕ್ಸ್ ಆಗಿದೆ. ಇಬ್ಬರೂ ಸ್ನೇಹಿತರಾಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಿ ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಮದುವೆಗೆ ಸಜ್ಜಾಗಿದ್ದಾರೆ.
Advertisement
ಇತ್ತೀಚೆಗೆ ನಟಿ ಎಂಗೇಜ್ ಆಗಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದರು. ಭಾವಿ ಪತಿ ಜೊತೆಗಿನ ಫೋಟೋ ಶೇರ್ ಮಾಡಿ ಸಂಬಂಧದ ಬಗ್ಗೆ ಅಧಿಕೃತಪಡಿಸಿದ್ದರು.