ಸ್ಯಾಂಡಲ್ವುಡ್ ಬ್ಯೂಟಿ ಮೇಘನಾ ರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಿಂತ ತಮ್ಮ ವೈಯಕ್ತಿಕ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ನಟಿ ಮೇಘನಾ ಎರಡನೇ ಮದುವೆಯ ವದಂತಿ ಸಖತ್ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ನಟಿ ಕೂಡ ಸ್ಪಷ್ಟನೆ ನೀಡಿದ್ದಾರೆ.
Advertisement
ನಟಿ ಮೇಘನಾ ರಾಜ್, ಸದ್ಯ ಮಗುವಿನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗ ರಾಯನ್ ಖುಷಿಯಲ್ಲೇ ಮೇಘನಾ ಜೀವನ ಸಾಗಿಸುತ್ತಿದ್ದಾರೆ. 2020ರಲ್ಲಿ ನಟ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದಿದ್ದರು. ಪತಿಯ ನೆನಪಿನಲ್ಲೇ ಇರುವ ನಟಿಗೆ ಇದೀಗ ಹೊಸ ವದಂತಿಯೊಂದನ್ನ ಎದುರಿಸುತ್ತಿದ್ದಾರೆ. ತಮ್ಮ ಎರಡನೇ ಮದುವೆಯ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ.
Advertisement
Advertisement
ಇತ್ತೀಚಿನ ಸಂದರ್ಶನವೊಂದರಲ್ಲಿ ಮೇಘನಾ ರಾಜ್ಗೆ ಎರಡನೇ ಮದುವೆಯ ಬಗ್ಗೆ ಯೋಚಿಸಿದ್ದೀರಾ ಎಂದು ನಿರೂಪಕ ಕೇಳಿದ್ದರು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ನಟಿ, ಮದುವೆಯಾಗು ಎಂದು ಸಲಹೆ ಕೊಡುವವರ ಗುಂಪಿದೆ. ಮದುವೆಯಾಗು ಅಂತಾ ಸಲಹೆ ಕೊಡುವವರ ಗುಂಪಿದೆ. ಮಗನೊಂದಿಗೆ ಖುಷಿಯಾಗಿರಬೇಕು ಎಂದು ಹೇಳುವವರ ಮತ್ತೊಂದು ಗುಂಪಿದೆ. ಹಾಗಾದರೆ ಯಾರ ಮಾತು ಕೇಳಲಿ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಅನಿರುದ್ಧ ಗಲಾಟೆ ಧಾರವಾಡಕ್ಕೆ ಶಿಫ್ಟ್: ಪ್ರಕರಣ ತಿಳಿಗೊಳಿಸಲು ಸ್ನೇಹಿತರ ಮನವಿ
Advertisement
ಜಿರಂಜೀವಿ ಯಾವಾಗಲೂ ಹೇಳುತ್ತಿದ್ದರು, ಜಗತ್ತು ಏನೇ ಹೇಳಿದ್ದರು. ನಿನ್ನ ಹೃದಯವನ್ನ ಆಲಿಸು ಎಂದು, ನಾನು ಇನ್ನೂ ಮದುವೆಯ ಬಗ್ಗೆ ಪ್ರಶ್ನೆ ಕೇಳಿಲ್ಲ. ಎಂದು ತಮ್ಮ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ತಮ್ಮ ಎರಡನೇ ಮದುವೆಯ ವದಂತಿಯ ಕುರಿತು ನಟಿ ಮಾತನಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]