ಸ್ಯಾಂಡಲ್‌ವುಡ್ (Sandalwood) ನಟಿ ಮೇಘನಾ ರಾಜ್(Meghana Raj) ಸದ್ಯ ಥೈಲ್ಯಾಂಡ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಆಪ್ತ ಸ್ನೇಹಿತೆಯರ ಜೊತೆ ಥೈಲ್ಯಾಂಡ್‌ನಲ್ಲಿ ಚಿಲ್ ಮಾಡುತ್ತಿದ್ದಾರೆ. ಸದ್ಯ ನಟಿಯ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ರಾಜಹುಲಿ, ಆಟಗಾರ, ಹೀಗೆ ಸಾಕಷ್ಟು ಚಿತ್ರಗಳಲ್ಲಿ ಮಿಂಚಿರುವ ಮೇಘನಾ ರಾಜ್ ವೆಕೇಷನ್ಸ್‌ಗಾಗಿ ಥೈಲ್ಯಾಂಡ್‌ಗೆ(Thailand) ಹಾರಿದ್ದಾರೆ. ಪತಿ ಚಿರು ಅಗಲಿಕೆಯ ನಂತರ ರಾಯನ್ ಪಾಲನೆಯಲ್ಲಿ ಬ್ಯುಸಿಯಿದ್ದ ನಟಿ ಇದೀಗ ವಿದೇಶಕ್ಕೆ ಹಾರಿದ್ದಾರೆ. ಸ್ನೇಹಿತೆಯರ ಜೊತೆ ಥೈಲ್ಯಾಂಡ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಇದನ್ನೂ ಓದಿ:ನನ್ನ ಮೊಮ್ಮಗ ಸೂಪರ್ ಸ್ಟಾರ್ ಆಗ್ತಾನೆ ಎಂದು ಭವಿಷ್ಯ ನುಡಿದ ಸುಂದರ್ ರಾಜ್
View this post on Instagram
ಥೈಲ್ಯಾಂಡ್‌ನ ಸುಂದರ ಪ್ರದೇಶದಲ್ಲಿ ಮೇಘನಾ ರಾಜ್ ಎಂಜಾಯ್ ಮಾಡ್ತಿದ್ದಾರೆ. ಮೇಘನಾ ರಾಜ್ ಹೆಸರಿರುವ ಹ್ಯಾಟ್ ತೊಟ್ಟು, ಮತ್ತೊಂದರಲ್ಲಿ ಸ್ವಿಮಿಂಗ್ ಫೂಲ್‌ನಲ್ಲಿರುವ ಫೋಟೋನಲ್ಲಿ ಮೇಘನಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
View this post on Instagram
ಇನ್ನೂ ಸಿನಿಮಾ ವಿಚಾರಕ್ಕೆ ಬಂದರೆ ಪನ್ನಗಭರಣ ಮತ್ತು ಮೇಘನಾ ರಾಜ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಬರಲಿದೆ. ಈ ಚಿತ್ರದ ಮೂಲಕ ಮತ್ತೆ ಮೇಘನಾ ತೆರೆಯ ಮೇಲೆ ಮಿಂಚಲಿದ್ದಾರೆ.