ಬೆಂಗಳೂರು: ಒಂದಕ್ಕಿಂತ ಒಂದು ಕ್ಯೂಟ್, ಒಂದಕ್ಕಿಂತ ಒಂದು ಛಬ್ಬಿ. ನೋಡತ್ತಿದ್ರೆ ನೋಡುತ್ತಾನೇ ಇರಬೇಕು ಅನಿಸುತ್ತೆ. ಡಾಗ್ ಶೋ ದಲ್ಲಿ ಶ್ವಾನಗಳ ತುಂಟಾಟ ನೋಡೋದೇ ಚೆಂದ.
ಹೌದು. ನಗರದಲ್ಲಿ ಪೆಟ್ಸ್ ಪ್ರಿಯರಿಗೆಂದೇ ಡಾಗ್ ಶೋ ಏರ್ಪಡಿಸಲಾಗಿತ್ತು. ಅಂತರಾಷ್ಟ್ರೀಯ ಶ್ವಾನಗಳ ಪ್ರದರ್ಶನದಲ್ಲಿ ಸುಮಾರು 50 ತಳಿಯ 450 ರಿಂದ 500 ಶ್ವಾನಗಳು ಭಾಗವಹಿಸಿದ್ದವು. ನಟಿ ಮೇಘನಾ ರಾಜ್ ಅವರು ಡಾಗ್ ಶೋ ಉದ್ಘಾಟಿಸಿದರು.
Advertisement
Advertisement
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಉದ್ಘಾಟಕಿ ಮೇಘನಾ ರಾಜ್, ಇದು ನನ್ನ ಮೊದಲನೆ ಡಾಗ್ ಶೋ. ಹೀಗಾಗಿ ಬಹಳ ಕುತೂಹಲವಿತ್ತು. ಯಾಕಂದ್ರೆ ನಾನು ಯಾವತ್ತೂ ಯಾವ ಡಾಗ್ ಶೋಗೂ ಬಂದಿಲ್ಲ. ಪ್ರಾಣಿಗಳು ಹೇಗೆ ನಡೆದುಕೊಳ್ಳುತ್ತವೆ ಹಾಗೆಯೇ ಅವುಗಳಿಗೆ ಹೇಗೆ ತರಬೇತಿ ನೀಡುತ್ತಾರೆ ಎಂಬುದರ ಬಗ್ಗೆ ಬಹಳ ಕುತೂಹಲ ಇತ್ತು. ನಾವು ಮನೆ ಮಂದಿಯನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತೇವೆಯೋ ಅದೇ ರೀತಿ ನಮ್ಮ ಮನೆಯ ಶ್ವಾನಗಳನ್ನು ನೋಡಿಕೊಳ್ಳಬೇಕಾಗುತ್ತದೆ ಅಂತ ಹೇಳಿದ್ರು.
Advertisement
Advertisement
ಡಾಗ್ ಶೋದಲ್ಲಿ ಭಾಗವಹಿಸಿದ ಧನಪಾಲ್ ಗೌಡ ಅವರು ಗ್ರೇಟ್ ಡೇನ್ ತಳಿಯ ಶ್ವಾನದ ಬಗ್ಗೆ ವಿವರಿಸಿದ್ದಾರೆ. ಈ ಶ್ವಾನ ಮೂಲತಃ ಜರ್ಮನಿಯದ್ದಾಗಿದೆ. ಇದಕ್ಕೆ ಪ್ರತಿದಿನ ರಾಯಲ್ ಕೆನನರ್ ಅನ್ನೋ ಫುಡ್ ಬರುತ್ತೆ, ಅದನ್ನು ನೀಡಬೇಕು. ಅದರ ಜೊತೆಗೆ ಚಿಕನ್ ನೀಡುತ್ತಾರೆ. ಸದ್ಯ ಇದು ಮನೆಯಲ್ಲಿ ಫ್ಯಾಶನ್ ಆಗಿ ಸಾಕುತ್ತಾರೆ.
ಈ ಶೋದಲ್ಲಿ ಉತ್ತರ ಕರ್ನಾಟಕದ ಫೇಮಸ್ ಮುಧೋಳ ನಾಯಿ ಎಲ್ಲರ ಗಮನ ಸೆಳೆಯಿತು. ವಿಶೇಷ ತಳಿಯ ಶ್ವಾನಗಳಾದ ಜರ್ಮನ್ ಶೆಫರ್ಡ್, ಡಾಬರ್ ಮನ್, ರಿಟ್ರೈವರ್, ಗೋಲ್ಡನ್ ರಿಟ್ರೈವರ್, ಬಾಕ್ಸರ್, ಗ್ರೇಟ್ ಡೇನ್, ಕಾಕರ್‍ಗಳು ಕೂಡ ನಾವೇನು ಕಮ್ಮಿಯಿಲ್ಲವೆಂಬಂತೆ ಫೋಸ್ ಕೊಡ್ತು. ಗಾರ್ಡನ್ ಸಿಟಿ ಜನರು ಈ ಶೋಗೆ ಫೀದಾ ಆಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews