ಹೊಸ ಹೇರ್‌ ಸ್ಟೈಲ್‌ ಮಾಡಿಸಿಕೊಂಡ ನಟಿ ಮೇಘನಾ ರಾಜ್

Public TV
1 Min Read
meghana

ಸ್ಯಾಂಡಲ್‌ವುಡ್‌ಗೆ ‘ತತ್ಸಮ ತದ್ಭವ’ (Tatsama Tadbhava Film) ಚಿತ್ರದ ಮೂಲಕ ಮೇಘನಾ ರಾಜ್ ಮತ್ತೆ ತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸಿನಿಮಾ ಶೂಟಿಂಗ್ ಪೂರ್ಣಗೊಂಡ ಬೆನ್ನಲ್ಲೇ ಕುಟುಂಬದ ಜೊತೆ ಕೂರ್ಗ್‌ಗೆ ಮೇಘನಾ ರಾಜ್ (Meghana Raj) ತೆರಳಿದ್ದರು. ಇದೀಗ ಹೊಸ ಹೈರ್ ಸ್ಟೈಲ್ ಮಾಡಿಸಿದ್ದಾರೆ. ಇದನ್ನೂ ಓದಿ:ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಏನೆಂದು ಕರೀತಾರೆ ಗೊತ್ತಾ?

meghana raj 3

ಫೀಮೇಲ್ ಓರಿಯೆಂಟೆಡ್ ಚಿತ್ರದ ಮೂಲಕ ಮೇಘನಾ ರಾಜ್ ಮತ್ತೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಚಿತ್ರದ ಪೋಸ್ಟರ್ ಲುಕ್‌ನಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಪುತ್ರ ರಾಯನ್ ಆರೈಕೆಯ ನಡುವೆಯೂ ಮೇಘನಾ ಸಿನಿಮಾ ಮಾಡಿ ಮುಗಿಸಿದ್ದಾರೆ.

meghana raj 1

ಸಿನಿಮಾ ಶೂಟಿಂಗ್ ಪೂರ್ಣಗೊಂಡ ಬೆನ್ನಲ್ಲೇ ಕೂರ್ಗ್ (Coorg) ತೆರಳಿ ಕುಟುಂಬದ ಜೊತೆ ಮೇಘನಾ ರಾಜ್ ಮಸ್ತ್ ಆಗಿ ಏಂಜಾಯ್ ಮಾಡಿದ್ದಾರೆ. ಪ್ರವಾಸ ಮುಗಿದ ಬೆನ್ನಲ್ಲೇ ನಟಿ ಕೂದಲಿಗೆ ಕತ್ತರಿ ಹಾಕಿದ್ದಾರೆ. ಹೊಸ ಹೇರ್ ಸ್ಟೈಲಿನಲ್ಲಿ ಮೇಘನಾ ಗಮನ ಸೆಳೆಯುತ್ತಿದ್ದಾರೆ.

ಮೇಘನಾ ಹೊಸ ಲುಕ್ ನೋಡ್ತಿದ್ದಂತೆ ಹೊಸ ಚಿತ್ರಕ್ಕೆ ಲುಕ್ ಬದಲಾವಣೆ ಮಾಡಿಕೊಂಡ್ರಾ? ಹೊಸ ಸಿನಿಮಾಗಾಗಿ ತಯಾರಿ ಮಾಡ್ತಿದ್ದಾರಾ ಎಂಬ ವಿಚಾರ ಇದೀಗ ಅನೇಕರ ಚರ್ಚೆಗೆ ಗ್ರಾಸವಾಗಿದೆ.

Share This Article