ನಟಿ ಮೇಘಾ ಶೆಟ್ಟಿ (Megha Shetty) ಇದೀಗ ಅಕ್ಕನ ಮದುವೆ ಸಂಭ್ರಮದಲ್ಲಿ ಮಿಂಚಿದ್ದಾರೆ. ಮೇಘಾ ಸಹೋದರಿ ನಿಶಾ ಕೂಡ ನಟಿಯಾಗಿ ಮಿಂಚಿದವರು. ಅವರ ಮದುವೆಗೆ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಹಾಜರಿ ಹಾಕಿ ಹೊಸ ಜೋಡಿಗೆ ಶುಭಕೋರಿದ್ದಾರೆ.
ನಟಿಯ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಇದಕ್ಕಾಗಿಯೇ ಮೇಘಾ ಸಿನಿಮಾ ಕೆಲಸದಿಂದ ಬ್ರೇಕ್ ಪಡೆದುಕೊಂಡಿದ್ದರು. ಮೇಘಾ ಅವರ ಹಿರಿಯ ಸಹೋದರಿ ನಿಶಾ ಶೆಟ್ಟಿ ಮದುವೆ ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ನಡೆದಿದೆ. ಇದನ್ನೂ ಓದಿ:ಸೆಲ್ಫಿಗೆ ಪೋಸ್ ಕೊಡದ ತಾಪ್ಸಿ ಪನ್ನು ಮೇಲೆ ಸೋಷಿಯಲ್ ಮೀಡಿಯಾ ಸ್ಟಾರ್ ಕಿಡಿ
View this post on Instagram
ಸಹೋದರಿ ನಿಶಾ ಶೆಟ್ಟಿಗೆ ಹಿಂದೂ ಮತ್ತು ಕ್ರಿಶ್ಚಿಯನ್ ಪದ್ಧತಿಯಂತೆ ಅದ್ಧೂರಿಯಾಗಿ ಮದುವೆ ನಡೆದಿದ್ದು, ಈ ಸಮಾರಂಭದಲ್ಲಿ ‘ಜೊತೆ ಜೊತೆಯಲಿ’ ಸೀರಿಯಲ್ ಟೀಮ್, ನಟಿ ಶರಣ್ಯಾ ಶೆಟ್ಟಿ, ಯಶವಂತ್, ಕಾವ್ಯಾ ರಮೇಶ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಇದನ್ನೂ ಓದಿ:ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾದಲ್ಲಿ ‘ಕೆಜಿಎಫ್’ ನಟಿ
ಅಕ್ಕನ ಮದುವೆ ಮೇಘಾ ಶೆಟ್ಟಿ ಮಿಂಚಿದ್ದು ನೋಡಿ ನಿಮ್ಮ ಮದುವೆ ಯಾವಾಗ ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ. ಮದುವೆಯಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಕಳೆದ ವರ್ಷ ಮತ್ತೋರ್ವ ಸಹೋದರಿ ಸುಷ್ಮಾ ಶೆಟ್ಟಿ ಮದುವೆ ಗ್ರ್ಯಾಂಡ್ ಆಗಿ ಮಾಡಲಾಗಿತ್ತು.
ಇನ್ನೂ ನಿಶಾ ಶೆಟ್ಟಿ ಅವರು ಬೆಂಗಳೂರು ಮೆಟ್ರೋ, ಗಲಾಟೆ, ಸೆಲನ್ಸ್ ಸಿನಿಮಾ ಸೇರಿದಂತೆ ತಮಿಳಿನ ಸಿನಿಮಾದಲ್ಲೂ ನಟಿಸಿದ್ದಾರೆ.