ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ʻಜೊತೆ ಜೊತೆಯಲಿʼ ನಟಿಯ ಹೊಸ ಫೋಟೋಶೂಟ್‌

Public TV
1 Min Read
megha shetty

ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಕರಾವಳಿ ಬೆಡಗಿ ಮೇಘಾ ಶೆಟ್ಟಿ (Megha Shetty) ಮಿಂಚ್ತಿದ್ದಾರೆ. ಇತ್ತೀಚಿಗೆ ಬಿಳಿ ಬಣ್ಣದ ಸೀರೆಯುಟ್ಟು ಹೊಸ ಫೋಟೋಶೂಟ್‌ನಲ್ಲಿ (Photoshoot) ನಟಿ ಕಂಗೊಳಿಸಿದ್ದಾರೆ. ಇದೀಗ ಈ ಫೋಟೋಶೂಟ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ಅರವಿಂದ್- ದಿವ್ಯಾ ಉರುಡುಗ ಪ್ರೀತಿಗೆ 2 ವರ್ಷಗಳ ಸಂಭ್ರಮ

megha shetty 1

`ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮತ್ತು ಸಿನಿಮಾ ಎರಡನ್ನು ಬ್ಯಾಲೆನ್ಸ್ ಮಾಡುತ್ತ ಚಿತ್ರರಂಗದಲ್ಲಿ ತಮ್ಮದೇ ಶೈಲಿಯಲ್ಲಿ ಛಾಪು ಮೂಡಿಸುತ್ತಿದ್ದಾರೆ. ಕಿರುತೆರೆಯ ಅನು ಸಿರಿಮನೆ ಪಾತ್ರದ ಮೂಲಕ ನಟಿ ಗಮನ ಸೆಳೆಯುತ್ತಿದ್ದಾರೆ.

megha shetty 1

ಕೆಲವು ಭಿನ್ನಾಭಿಪ್ರಾಯದಿಂದ ನಟ ಅನಿರುದ್ಧ ಸೀರಿಯಲ್‌ನಿಂದ ಹೊರನಡೆದರು. ಅದೇ ಸಮಯದಲ್ಲಿ ಅನು ಸಿರಿಮನೆ (Anu Sirimane) ಪ್ರೆಗ್ನೆಂಟ್ ಎಂದು ಸ್ಟೋರಿ ಲೈನ್ ಪ್ರಸಾರವಾಗುತ್ತಿತ್ತು. ಈಗಲೂ ಈ ಬಗ್ಗೆ ಸೀರಿಯಲ್‌ನಲ್ಲಿ ಅನು ಪ್ರೆಗ್ನೆಂಟ್ ಎಂದೇ ಕಥೆಯಲ್ಲಿ ತೋರಿಸಲಾಗುತ್ತಿದೆ. ತೆರೆ ಮೇಲಿನ ಕಥೆಯನ್ನ ನೋಡುಗರು ನಿಜ ಜೀವನದಲ್ಲೂ ನಿಜ ಎಂದೇ ಭಾವಿಸಿ ಮಾತನಾಡುತ್ತಾರೆ ಎಂಬುದಕ್ಕೆ ಮೇಘಾ ಶೆಟ್ಟಿ ಫೋಟೋಶೂಟ್ ಕಥೆಯೇ ತಾಜಾ ಉದಾಹರಣೆಯಾಗಿದೆ.

ಇತ್ತೀಚಿಗೆ ನಟಿ ಮೇಘಾ, ಬಿಳಿ ಬಣ್ಣದ ಡಿಸೈನರ್ ಸೀರೆಯುಟ್ಟು ಮಿಂಚಿರುವ ಚೆಂದದ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಈ ಫೋಟೋನೇ ಈಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಸೀರಿಯಲ್‌ನಲ್ಲಿ ಅನು ಸಿರಿಮನೆ ಗರ್ಭಿಣಿ ಎಂದು ಜನರಿಗೆ ಪದೇ ಪದೇ ಹೇಳುತ್ತಿದ್ದಾರೆ. ಆದರೆ ಒಂದು ದಿನವೂ ಹೊಟ್ಟೆ ಕಾಣಿಸಿಲ್ಲ. ಇಲ್ಲಿ ನೋಡಿದರೆ ಹೊಟ್ಟೆ ತೋರಿಸಿಕೊಂಡು ಫೋಟೋ ಹಾಕಿದ್ದಾರೆ ಎಂದು ನಟಿ ಮೇಘಾ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಈ ಪೋಸ್ಟ್ ಇದೀಗ ಸಖತ್ ಸದ್ದು ಮಾಡ್ತಿದೆ.

Share This Article
Leave a Comment

Leave a Reply

Your email address will not be published. Required fields are marked *