ಕಿರುತೆರೆಯ ಮುದ್ದಾದ ಜೋಡಿ ಅನಿರುದ್ಧ್ (Aniruddha Jatkar) ಮತ್ತು ಅನು ಸಿರಿಮನೆ (Anu Sirimane) ಮತ್ತೆ ಒಂದಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. `ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮೂಲಕ ಮನೆ ಮಾತಾದ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
View this post on Instagram
ಟಿವಿ ಲೋಕದ ಸಕ್ಸಸ್‌ಫುಲ್ `ಜೊತೆ ಜೊತೆಯಲಿ’ ಸೀರಿಯಲ್‌ನಿಂದ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಹೊರಬಂದ ಮೇಲೆ ಮತ್ತೆ ಆರ್ಯ ಮತ್ತು ಅನು ಜೊತೆಯಾಗಿ ಈ ಮೂಲಕ ತಮ್ಮ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅನಿರುದ್ಧ್ ಮಾಡ್ತಿದ್ದ ಪಾತ್ರವನ್ನ ಇದೀಗ ಹರೀಶ್ ರಾಜ್(Harish Raj) ನಿಭಾಯಿಸುತ್ತಿದ್ದಾರೆ. ಅನಿರುದ್ಧ್ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್‌ನ ತೆರೆಯ ಮೇಲೆ ಮಿಸ್ ಮಾಡಿಕೊಳ್ತಿರುವ ಫ್ಯಾನ್ಸ್‌ಗೆ ಈ ಜೋಡಿಯ ನಯಾ ಫೋಟೋ ನೋಡಿ ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಬ್ರೇಕಪ್ ಮಾಡಿಕೊಂಡ ರಾಕೇಶ್ – ಅಮೂಲ್ಯ
ಅನಿರುದ್ಧ್ ಮತ್ತು ಭಾರತಿ ವಿಷ್ಣುವರ್ಧನ್ (Bharathi Vishnuvardhan) ಅವರ ಹೊಸ ಮನೆಯ ಗೃಹ ಪ್ರವೇಶಕ್ಕೆ (House Warming) ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ (Megha Shetty) ಸಾಕ್ಷಿಯಾಗಿದ್ದಾರೆ. ಅನಿರುದ್ಧ್ ಅವರ ಹೊಸ ಮನೆಯ ಸಂಭ್ರಮಕ್ಕೆ ಮೇಘಾ ಕೂಡ ಸಾಕ್ಷಿಯಾಗಿದ್ದು, ತಾವು ಕೂಡ ಅವರ ಕುಟುಂಬದಲ್ಲಿ ಒಬ್ಬರಾಗಿ ಒಳ್ಳೆಯ ಸಮಯವನ್ನ ಕಳೆದಿದ್ದಾರೆ. ಆರ್ಯ ಮನೆಯ ಗೃಹಪ್ರವೇಶದ ಸಂಭ್ರಮದ ಫೋಟೋವನ್ನು ನಟಿ ಅನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
View this post on Instagram
ಆರ್ಯ ಮತ್ತು ಜೋಡಿ ಹೊಸ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಬಹುದಿನಗಳ ನಂತರ ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.