ಮತ್ತೆ ಕಿರುತೆರೆಗೆ ಬಂದ ಮೇಘಾ ಶೆಟ್ಟಿ

Public TV
1 Min Read
megha shetty

‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮೂಲಕ ಎಂಟ್ರಿ ಕೊಟ್ಟಿದ್ದ ಮೇಘಾ ಶೆಟ್ಟಿ (Megha Shetty) ಕನ್ನಡ ಮತ್ತು ತಮಿಳಿನಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ವಿಧಿವಶ

megha shetty

ಸದಾ ಹೊಸ ಬಗೆಯ ಪಾತ್ರದ ಮೂಲಕ ಬರೋ ನಟಿ ಮೇಘಾ ಶೆಟ್ಟಿ ಈಗ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಮುದ್ದು ಸೊಸೆ’ (Muddu Sose Serial) ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಅವರು ದರ್ಶನ ನೀಡುತ್ತಿದ್ದಾರೆ. ಇದನ್ನೂ ಓದಿ:ಚಂದನ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ‘ಸೀತಾ ವಲ್ಲಭ’ ನಟಿ

megha shetty

ಇಂದಿನಿಂದ ‘ಮುದ್ದು ಸೊಸೆ’ ಸೀರಿಯಲ್ ಪ್ರಸಾರವಾಗುತ್ತಿದೆ. ‘ಬಿಗ್ ಬಾಸ್’ ಖ್ಯಾತಿಯ ತ್ರಿವಿಕ್ರಮ್ (Trivikram) ಮತ್ತು ಪ್ರತಿಮಾ (Prathima Thakur) ಇದರಲ್ಲಿ ಅತಿಥಿ ಪಾತ್ರವನ್ನು ಮೇಘಾ ಶೆಟ್ಟಿ ನಿಭಾಯಿಸಿದ್ದಾರೆ. ಈ ಸೀರಿಯಲ್ ಅನ್ನು ಅವರೇ ಪ್ರಸ್ತುತಪಡಿಸುತ್ತಿದ್ದಾರೆ. ಈ ಸೀರಿಯಲ್ ನಿರ್ಮಾಣಕ್ಕೆ ಅವರು ಕೂಡ ಸಾಥ್ ನೀಡಿರೋದು ವಿಶೇಷ.

megha shetty 1

ಸದ್ಯ ಇವರ ಕೈಯಲ್ಲಿ ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’, ‘ಚೀತಾ’ ಹಾಗೂ ‘ಗ್ರಾಮಾಯಣ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಸಿನಿಮಾವೊಂದರಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾಗಳು ಅವರಿಗೆ ಯಶಸ್ಸು ತಂದುಕೊಡುತ್ತಾ? ಎಂದು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Share This Article