ಚಿತ್ರರಂಗದ ಕ್ಯೂಟ್ ಜೋಡಿಗಳಾಗಿದ್ದ ನಿವೇದಿತಾ ಗೌಡ (Niveditha Gowda) ಮತ್ತು ಚಂದನ್ ಶೆಟ್ಟಿ (Chandan Shetty) ಡಿವೋರ್ಸ್ ಪಡೆದ ಬೆನ್ನಲ್ಲೇ ನಟಿ ಮಯೂರಿ (Mayuri) ದಾಂಪತ್ಯದಲ್ಲಿ ಬಿರುಕಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಈಗ ಈ ಬಗ್ಗೆ ‘ಕೃಷ್ಣಲೀಲಾ’ ನಟಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ ಪ್ರಕರಣ: ಎಲ್ಲವನ್ನೂ ಕಾನೂನು ನೋಡಿಕೊಳ್ಳುತ್ತೆ ಎಂದ ಜುಗಾರಿ ಅವಿನಾಶ್
ನಟಿ ಮಯೂರಿ ಸಾಂಸಾರಿಕ ಜೀವನ ಕುರಿತು ಗಾಸಿಪ್ ಕೇಳಿಬಂದಿತ್ತು. ಇನ್ಸ್ಟಾಗ್ರಾಂನಲ್ಲಿ ಪತಿ ಜೊತೆ ಇರುವ ಫೋಟೋ ಡಿಲೀಟ್ ಮಾಡಿದ್ದೇ ಈ ಗಾಸಿಪ್‌ಗೆ ಕಾರಣವಾಗಿತ್ತು. ಹತ್ತು ವರ್ಷಗಳ ಕಾಲ ಪ್ರೀತಿಸಿ ಅರುಣ್ ಎಂಬುವರನ್ನು 4 ವರ್ಷದ ಹಿಂದೆ ಮದುವೆಯಾಗಿದ್ದರು ಮಯೂರಿ. ಈ ದಂಪತಿಗೆ ಓರ್ವ ಪುತ್ರನೂ ಇದ್ದಾನೆ. ನಟಿ ಡಿವೋರ್ಸ್ ಕುರಿತು ಸುದ್ದಿ ಹಬ್ಬಿದ ಬೆನ್ನಲ್ಲೇ, ನನ್ನ ಕುಟುಂಬ ಚೆನ್ನಾಗಿಯೇ ಇದೆ. ನಾವು ಚೆನ್ನಾಗಿಯೇ ಇದ್ದೇವೆ ಎಂದು ನಟಿ ‘ಪಬ್ಲಿಕ್ ಟಿವಿ’ಗೆ ಮಾತನಾಡಿದ್ದಾರೆ.
ಈಗ ಡಿಜಿಟಲ್ ಮೀಡಿಯಾದಲ್ಲಿ ಹಾಡು ಸ್ಟೋರಿ ಹಾಕಿದರು ಒಂದೊಂದು ಅರ್ಥ ಬರುತ್ತೆ. ಒಳ್ಳೆಯ ಕಾಮೆಂಟ್ಸ್ ಮತ್ತು ಕೆಟ್ಟ ಕಾಮೆಂಟ್ಸ್ ಎಲ್ಲಾ ಬರುತ್ತದೆ. ಫೋಟೋ ಡಿಲೀಟ್ ಮಾಡಿದ್ರೆ ಇನ್ನೇನೋ ಅರ್ಥ. ಯಥಾ ದೃಷ್ಟಿ ತಥಾ ಸೃಷ್ಟಿ. ನನ್ನ ದೃಷ್ಟಿ ಹೇಗೆ ಅಂದರೆ ಪ್ರೀತಿ ಎಲ್ಲಿರುತ್ತೋ ಅಲ್ಲೇ ನನ್ನ ಮನಸ್ಸು ವಾಲುತ್ತೆ. ಪಬ್ಲಿಕ್ ಫಿಗರ್ ಆಗಿ ಸಾಮಾಜಿಕ ಕಳಕಳಿ ನಮಗೆ ಇರುತ್ತೆ, ನಮ್ಮನ್ನ ಜನ ನೋಡ್ತಾರೆ ಪ್ರೀತಿಸ್ತಾರೆ. ಅಂದ್ಮೇಲೆ ಜವಾಬ್ದಾರಿ ನಮ್ಮ ಮೇಲೆಯೂ ಇರುತ್ತದೆ. ನಾನು ಹ್ಯಾಪಿ ಆಗಿದ್ದೀನಿ ಎಂದಿದ್ದಾರೆ.
ಅಂದಹಾಗೆ, ಕೃಷ್ಣಲೀಲಾ, ಪೊಗರು, ಕರಿಯಾ 2, ಇಷ್ಟಕಾಮ್ಯ, ನನ್ನ ಪ್ರಕಾರ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಮಯೂರಿ ನಟಿಸಿದ್ದಾರೆ.