ಮಂಡ್ಯ: ಮಗಳು ನಿರ್ದೇಶಕನೊಂದಿಗೆ ಓಡಿ ಹೋಗಿದ್ದಕ್ಕೆ ಮನನೊಂದು ವಿಷ ತೆಗೆದುಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಟಿ ವಿಜಯಲಕ್ಷ್ಮಿ ತಾಯಿ ಇಂದು ಕೊನೆಯುಸಿರೆಳೆದಿದ್ದಾರೆ. ಆದರೆ ನಟಿ ತಾಯಿಯ ಅಂತ್ಯಕ್ರಿಯೆಗೂ ಬಂದಿಲ್ಲ. ಇದನ್ನೂ ಓದಿ: ‘ನಮ್ಮನ್ನು ಬದುಕಲು ಬಿಡಿ’- ನಿರ್ದೇಶಕನ ಜೊತೆ ಓಡಿಹೋಗಿದ್ದ ನಟಿ ರಾಯಚೂರಿನಲ್ಲಿ ಪ್ರತ್ಯಕ್ಷ
ಸವಿತಾ ಮೃತ ತಾಯಿ. ಕಳೆದ ಒಂದು ವಾರದ ಹಿಂದೆ ನಟಿ ವಿಜಯಲಕ್ಷ್ಮಿ ನಿರ್ದೇಶಕ ಆಂಜನಪ್ಪ ಜೊತೆ ಓಡಿ ಹೋಗಿದ್ದಳು. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ತಾಯಿ ಸವಿತಾ ಹಾಗೂ ಅಜ್ಜಿ ವಿಷ ತೆಗೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ವಿಷ ತೆಗೆದುಕೊಂಡ ಪರಿಣಾಮ ವಿಜಯಲಕ್ಷ್ಮಿ ಅಜ್ಜಿ ಸಾವನ್ನಪ್ಪಿದ್ದರು. ಅಂದು ವಿಜಯಲಕ್ಷ್ಮಿ ಅಜ್ಜಿಯ ಅಂತ್ಯಸಂಸ್ಕಾರಕ್ಕೂ ಬಂದಿರಲಿಲ್ಲ. ಇದನ್ನೂ ಓದಿ: ನಿರ್ದೇಶಕನೊಂದಿಗೆ ನಟಿ ಪರಾರಿ- ತಾಯಿ ಆತ್ಮಹತ್ಯೆಗೆ ಯತ್ನ, ಅಜ್ಜಿ ಸಾವು
Advertisement
Advertisement
ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ವಿಜಯಲಕ್ಷ್ಮಿ ತಾಯಿ ಸವಿತಾ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಾಯಿ ಸಾವನ್ನಪ್ಪಿದರೂ ವಿಜಯಲಕ್ಷ್ಮಿ ಮಾತ್ರ ತಾಯಿಯ ಮುಖ ನೋಡಲು ಸಹ ಬಂದಿಲ್ಲ. ಸವಿತಾ ಅವರ ಅಂತ್ಯಕ್ರಿಯೆಯನ್ನು ಜಿಲ್ಲೆಯ ಮದ್ದೂರು ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಮಾಡಲಾಗಿದೆ.
Advertisement
ಏನಿದು ಪ್ರಕರಣ?
ಕನ್ನಡ ಚಿತ್ರರಂಗದಲ್ಲಿ ಸುಮಾರು 16 ಸಿನಿಮಾಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ ಇದೀಗ ಪ್ರೇಮಮಹಲ್, ಜವಾರಿ ಲವ್, ಪ್ರೊಡಕ್ಷನ್ ನಂ.1 ಎಂಬ ಸಿನಿಮಾಗಳಿಗೆ ಸಹಿ ಹಾಕಿ ತುಂಗಾಭದ್ರಾ ಚಿತ್ರದ ನಿರ್ದೇಶಕ ಆಂಜನಪ್ಪ ಜೊತೆ ಓಡಿ ಹೋಗಿದ್ದರು. ನಂತರ ನಟಿ ವಿಜಯಲಕ್ಷ್ಮಿ ರಾಯಚೂರಿನಲ್ಲಿ ಪತಿಯ ಜೊತೆ ಪ್ರತ್ಯಕ್ಷವಾಗಿದ್ದರು.
Advertisement
ನಾನು ತುಂಗಭದ್ರಾ ಸಿನಿಮಾದಲ್ಲಿ ನಟಿಸುವಾಗ ಲವ್ ಮಾಡಿ ಮದುವೆ ಆಗಿದ್ದೇನೆ. ನನ್ನನ್ನು ಯಾರೂ ಕರೆದುಕೊಂಡು ಬಂದಿಲ್ಲ. ನಾನು ಪ್ರೀತಿಸಿ ಮದುವೆ ಆಗಿದ್ದೇನೆ. ನಮ್ಮ ಅಜ್ಜಿ ಸಾವನ್ನಪ್ಪಿಲ್ಲ, ನಮ್ಮ ತಾಯಿ ನಾಟಕ ಮಾಡುತ್ತಿದ್ದಾರೆ. ನಾವು ಗಂಗಾವತಿಯಲ್ಲಿ ಮದುವೆ ಆಗಿದ್ದೇವೆ. ನನ್ನ ತಾಯಿ ಸವಿತಾ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ವಿಜಯಲಕ್ಷ್ಮಿ, ಕಳೆದ 10 ವರ್ಷಗಳಿಂದ ಚನ್ನಪಟ್ಟಣದಲ್ಲಿ ವಾಸವಾಗಿದ್ದರು. ತಮ್ಮ ಸಾಕು ತಂದೆ ಸ್ವಾಮಿ ಅವರ ಪೋಷಣೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಟಿ ವಿಜಯಲಕ್ಷ್ಮಿ ಶಿವರಾಜ್‍ಕುಮಾರ್ ನಟನೆಯ ಆಯುಷ್ಮಾನುಭವ ಸೇರಿದಂತೆ 16 ಚಿತ್ರಗಳಲ್ಲಿ ಸಹ ನಟಿಯಾಗಿ ನಟಿಸಿದ್ದರು. ನಂತರ ತುಂಗಾಭಧ್ರಾ, ಪ್ರೇಮಮಹಲ್, ಜವಾರಿ ಲವ್, ಪ್ರೊಡಕ್ಷನ್ ನಂ.1 ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸುವ ಅವಕಾಶ ಬಂದಿದ್ದವು. ಈ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳು ಅರ್ಧದಷ್ಟು ಶೂಟಿಂಗ್ ಆಗಿದೆ.