‘ಟಗರು’ (Tagaru) ನಟಿ ಮಾನ್ವಿತಾ ಕಾಮತ್ (Manvita Kamath) ಸದ್ಯ ಬಾಲಿಗೆ ಹಾರಿದ್ದಾರೆ. ಪತಿ ಅರುಣ್ ಜೊತೆ ವಿದೇಶದಲ್ಲಿ ಸುತ್ತಾಡುತ್ತಿದ್ದಾರೆ. ಸದ್ಯ ಹನಿಮೂನ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
View this post on Instagram
ಕೇಸರಿ ಬಣ್ಣದ ಡ್ರೆಸ್ ಧರಿಸಿ ತಲೆಗೆ ಹ್ಯಾಟ್ ಹಾಕಿ ಬಾಲಿಯ (Bali) ಸುಂದರ ಜಾಗಗಳಿಗೆ ಪತಿ ಜೊತೆ ನಟಿ ಭೇಟಿ ನೀಡುತ್ತಿದ್ದಾರೆ. ಮಾನ್ವಿತಾ ಪ್ರವಾಸದ ಫೋಟೋಗೆ ಬಗೆ ಬಗೆಯ ಕಾಮೆಂಟ್ಸ್ ಹರಿದು ಬಂದಿದೆ. ಇದನ್ನೂ ಓದಿ:ಈ ಕಂಡೀಷನ್‌ಗೆ ಓಕೆ ಅಂದ್ರೆ ಲಿಪ್‌ಲಾಕ್ ದೃಶ್ಯದಲ್ಲಿ ನಟಿಸಲು ಸಿದ್ಧ: ರಕುಲ್
View this post on Instagram
ಅಂದಹಾಗೆ, ಮೇ 1ರಂದು ಕಳಸದಲ್ಲಿ ಅರುಣ್ ಎಂಬುವವರ ಜೊತೆ ಮಾನ್ವಿತಾ ಕೊಂಕಣಿ ಸಂಪ್ರದಾಯಂತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ತಾಯಿಯ ಆಸೆಯಂತೆ ನಟಿ ಮದುವೆಯಾದರು.
ಮದುವೆ ಬಳಿಕ ಪತಿಯ ಜೊತೆ ಅತ್ತೆ ಮತ್ತು ಮಾವನ ಜೊತೆ ಸೇರಿ ಗೋವಾಗೆ ತೆರಳಿದ್ದರು. ಕುಟುಂಬದ ಜೊತೆ ನಟಿ ಕಾಲ ಕಳೆದಿದ್ದರು.