ಅಕ್ಷಯ್ ಜೊತೆಗಿನ ವಯಸ್ಸಿನ ಅಂತರದ ಬಗ್ಗೆ ಮೌನ ಮುರಿದ ಮಾನುಷಿ ಚಿಲ್ಲರ್

Public TV
1 Min Read
Manushi Chhillar 2

ಟಿ ಮಾನುಷಿ ಚಿಲ್ಲರ್ (Manushi Chhillar) ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅಕ್ಷಯ್ ಕುಮಾರ್ (Akshay Kumar) ಜೊತೆಗಿನ 30 ವರ್ಷಗಳ ಅಂತರದ ಬಗ್ಗೆ ನಟಿ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿನ ಹಲವು ಟ್ರೋಲ್‌ಗಳ ಬಗ್ಗೆ ನಟಿ ಮೌನ ಮುರಿದಿದ್ದಾರೆ.

akshay kumar

ಅಕ್ಷಯ್ ಕುಮಾರ್, ಮಾನುಷಿ ಎರಡು ಸಿನಿಮಾಗಳು ಜೊತೆಯಾಗಿ ನಟಿಸಿದ್ದಾರೆ. ಅಕ್ಷಯ್‌ಗೆ 56 ವರ್ಷ, ಮಾನುಷಿಗೆ 26 ವರ್ಷವಾಗಿದ್ದು, ಇಬ್ಬರ ನಡುವೆ 30 ವರ್ಷಗಳ ಅಂತರವಿದೆ. ಈ ವಿಚಾರ ಕೀಳು ಮಟ್ಟದಲ್ಲಿ ಟ್ರೋಲ್ ಆಗಿತ್ತು. ಈ ಬಗ್ಗೆ ನಟಿಗೆ ಸಂದರ್ಶನವೊಂದರಲ್ಲಿ ಪ್ರಶ್ನೆ ಎದುರಾಗಿದೆ. ಇದನ್ನೂ ಓದಿ:ತೆಲುಗು ಚಿತ್ರಗಳಿಂದ ಶ್ರೀಲೀಲಾ ಔಟ್- ಕಾಲಿವುಡ್‌ನತ್ತ ‘ಕಿಸ್’ ನಟಿ

Manushi Chhillar 1 1

ನಟಿ ಪ್ರತಿಕ್ರಿಯಿಸಿ, ಸೂಪರ್ ಸ್ಟಾರ್ ಜೊತೆಗೆ ಕೆಲಸ ಮಾಡುವುದು ಒಳ್ಳೆಯದು. ನೀವು ಹಲವು ವಿಚಾರಗಳನ್ನು ಅರಿತುಕೊಳ್ಳುತ್ತೀರಿ. ಅಕ್ಷಯ್ ಕುಮಾರ್ ಅವರೊಂದಿಗೆ ನಟಿಸಿರುವುದು ಖುಷಿಯಿದೆ. ನಟನೆ ಅಂತ ಬಂದಾಗ ವಯಸ್ಸಿನ ಅಂತರ ಮ್ಯಾಟರ್‌ ಆಗಲ್ಲ ಎಂದು ತಿಳಿಸಿದ್ದಾರೆ. ನನ್ನ ಮೊದಲ ಸಿನಿಮಾದಲ್ಲಿ ನಟನೆಗೆ ಸ್ಕೋಪ್ ಇತ್ತು. ‘ಬಡೆ ಮಿಯಾನ್ ಚೋಟೆ ಮಿಯಾನ್’ ಸಿನಿಮಾದಲ್ಲಿ ಮಾರ್ಕೆಟಿಂಗ್‌ಗಾಗಿ ಹಾಡುಗಳನ್ನು ಮಾಡಿದ್ದೇವೆ. ಇದು ಲವ್ ಸ್ಟೋರಿ ಸಿನಿಮಾ ಅಲ್ಲ ಎಂದಿದ್ದಾರೆ.

ಮಾನುಷಿ ಚಿಲ್ಲರ್ ನಟಿಸಿದ ಮೊದಲ ಸಿನಿಮಾನೇ ‘ಸಾಮ್ರಾಟ್ ಪೃಥ್ವಿರಾಜ್’ ಈ ಚಿತ್ರದಲ್ಲಿ ಅಕ್ಷಯ್‌ಗೆ ನಾಯಕಿಯಾಗಿ ನಟಿಸಿದ್ದರು. ಬಡೆ ಮಿಯಾನ್ ಚೋಟೆ ಮಿಯಾನ್ ಸಿನಿಮಾದಲ್ಲಿಯೂ ಮಾನುಷಿ ನಟಿಸಿದ್ದಾರೆ.

Share This Article