ಮಾಜಿ ವಿಶ್ವ ಸುಂದರಿ, ಬಾಲಿವುಡ್ ಬೆಡಗಿ ಮಾನುಷಿ ಚಿಲ್ಲರ್ (Manushi Chhillar) ಇದೀಗ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಜಾನ್ವಿ ಕಪೂರ್ (Janhvi Kapoor) ಬಾಯ್‌ಫ್ರೆಂಡ್ ಶಿಖರ್ ಅವರ ಕಿರಿಯ ಸಹೋದರ ವೀರ್ ಪಹಾರಿಯಾ (Veer Pahariya) ಜೊತೆ ಮಾನುಷಿ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಈಗ ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾಗಿದೆ.
ಅಂಬಾನಿ ಮನೆ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಇದೇ ಜು.12ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ಯ ಈ ಜೋಡಿಯ ಸಂಗೀತ ಕಾರ್ಯಕ್ರಮ ಮುಂಬೈನಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ವೀರ್ ಜೊತೆ ಮಾನುಷಿ ಚಿಲ್ಲರ್ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇಬ್ಬರ ಬಗ್ಗೆ ಡೇಟಿಂಗ್ ಕುರಿತು ಗುಮಾನಿ ಹಬ್ಬಿದೆ. ಇದನ್ನೂ ಓದಿ:‘ಟೈಟಾನಿಕ್’ ಸಿನಿಮಾ ನಿರ್ಮಾಪಕ ಜಾನ್ ಲ್ಯಾಂಡೌ ನಿಧನ
View this post on Instagram
ಇಬ್ಬರೂ ಲೈಟ್ ಬಣ್ಣದ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಪಲ್ ಡ್ರೆಸ್ ಕೋಡ್‌ನಲ್ಲಿ ಎಂಟ್ರಿ ಕೊಟ್ಟಿರೋದು ಚರ್ಚೆಯಾಗ್ತಿದೆ. ಇದು ನಿಜನಾ ಎಂದು ನಟಿ ಪ್ರತಿಕ್ರಿಯೆ ನೀಡುವವರೆಗೂ ಕಾಯಬೇಕಿದೆ. ಅಂದಹಾಗೆ, ಈ ಹಿಂದೆ ಉದ್ಯಮಿ ನಿಖಿಲ್ ಕಾಮತ್ ಜೊತೆ ಮಾನುಷಿ ಚಿಲ್ಲರ್ ಹೆಸರು ಸದ್ದು ಮಾಡಿತ್ತು.
ಇನ್ನೂ 2022ರಲ್ಲಿ ಅಕ್ಷಯ್ ಕುಮಾರ್‌ಗೆ ನಾಯಕಿಯಾಗಿ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಮೂಲಕ ಬಾಲಿವುಡ್‌ಗೆ ನಟಿ ಎಂಟ್ರಿ ಕೊಟ್ಟರು.