ಬಿಕಿನಿ ಧರಿಸುವಂತೆ ಒತ್ತಾಯಿಸಿದ್ದ ಫೋಟೋಗ್ರಾಫರ್- ಕಹಿ ಘಟನೆ ನೆನೆದ ಮನಿಷಾ ಕೊಯಿರಾಲಾ

Public TV
1 Min Read
Manisha Koirala 1

ದಿಲ್ ಸೇ, ಮನ್, ಇಂಡಿಯನ್, ಇತ್ತೀಚಿನ ‘ಹೀರಾಮಂಡಿ’ (Heeramandi) ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಮನಿಷಾ ಕೊಯಿರಾಲಾ (Manisha Koirala) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ತಮಗಾದ ಕಹಿ ಘಟನೆ ನೆನೆದು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

Manisha Koirala

ನಾನು ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಒಮ್ಮೆ ಫೋಟೋಶೂಟ್ ಮಾಡಿಸುವಂತೆ ಹೇಳಿದ್ದರು. ಆಗ ಖ್ಯಾತ ಫೋಟೋಗ್ರಾಫರ್ ಒಬ್ಬರು ಇದ್ದರು. ಅಮ್ಮನ ಜೊತೆ ನಾನು ಅವರ ಬಳಿ ಫೋಟೋಶೂಟ್ ಮಾಡಿಸಿಕೊಳ್ಳಲು ಹೋಗಿದ್ದೆ. ಆಗ ಆತ ನನ್ನನ್ನು ನೋಡಿ ನೀವೇ ಮುಂದಿನ ಸ್ಟಾರ್ ಎಂದರು. ಬಳಿಕ ಫೋಟೋ ಕ್ಲಿಕ್ಕಿಸಲು ಬಿಕಿನಿ ಧರಿಸಿ ಬರುವಂತೆ ಹೇಳಿದ್ದರು. ನಾನು ಒಪ್ಪದಾಗ ಬಹಳ ಒತ್ತಾಯಿಸಿದರು ಎಂದು ಮನಿಷಾ ಮಾತನಾಡಿದ್ದಾರೆ. ಇದನ್ನೂ ಓದಿ:‘ಕಣಂಜಾರು’ ಚಿತ್ರದ ಟೀಸರ್ ಮೆಚ್ಚಿದ ಫ್ಯಾನ್ಸ್

Manisha Koirala 2

ನಾನು ಬೀಚ್‌ಗೆ ಹೋದಾಗ ಅಥವಾ ಈಜಲು ಹೋದಾಗ ಮಾತ್ರ ಈ ರೀತಿ ಬಟ್ಟೆ ಧರಿಸುತ್ತೇನೆ. ಒಂದು ವೇಳೆ ಈ ರೀತಿಯಲ್ಲಿ ನಾನು ಸಿನಿಮಾ ಅವಕಾಶ ಪಡೆಯಬೇಕು ಎನ್ನುವುದಾದರೆ ಅದು ನನಗೆ ಬೇಡ. ನಾನು ಬಿಕಿನಿ ಧರಿಸುವುದಿಲ್ಲ. ನನ್ನ ಫೋಟೋ ತೆಗೆಯುವುದಾದರೆ ಪೂರ್ತಿ ಬಟ್ಟೆಯಲ್ಲೇ ತೆಗೆಯಿರಿ ಅಂತ ಆತನಿಗೆ ಉತ್ತರಿಸಿದ್ದೆ ಎಂದು ಆ ಘಟನೆಯನ್ನು ನಟಿ ಮನಿಷಾ ಮೆಲುಕು ಹಾಕಿದ್ದಾರೆ.

ನಾನು ಆತ ಹೇಳಿದಂತೆ ಕೇಳದೇ ಇದ್ದಾಗ ಆತ ಹೇಳಿದ ಒಂದು ಮಾತು ನನಗೆ ಇನ್ನು ನೆನಪಿದೆ. ಮಣ್ಣು ಹದವಾಗಲು ಒಪ್ಪದಿದ್ದರೆ ನಾನು ಮೂರ್ತಿ ಮಾಡಲು ಹೇಗೆ ಸಾಧ್ಯ? ಎಂದು ಆತ ನನಗೆ ತಿರುಗಿ ಉತ್ತರಿಸಿದ್ದ. ಇದು ಕೆಲವರ ಮನಸ್ಥಿತಿ. ಎಲ್ಲರೂ ಹೀಗೆ ಇರುವುದಿಲ್ಲ. ನಾನು ದೊಡ್ಡ ಸೆಲೆಬ್ರಿಟಿ ಆದ ಬಳಿಕ ಅದೇ ಫೋಟೊಗ್ರಫರ್ ನನ್ನ ಫೋಟೋ ಕ್ಲಿಕ್ಕಿಸಲು ನನ್ನ ಬಳಿ ಬಂದಿದ್ದ. ಆತನಿಗೆ ನಾನು ಅವಮಾನ ಮಾಡುತ್ತಿಲ್ಲ ಎಂದು ಮನಿಷಾ ಹಳೆಯ ಘಟನೆಯನ್ನು ಹಂಚಿಕೊಂಡಿದ್ದಾರೆ.

Share This Article