ಬೆಂಗಳೂರು: ಗೂಳಿ ಸಿನಿಮಾ ನಟಿ ಮಮತಾ ಮೋಹನದಾಸ್ ಎರಡು ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿ ಮಾಡುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.
ಕನಸು ಇಂದು ನನಸಾಗಿದೆ. ನಾನು ಇದಕ್ಕಾಗಿ ದಶಕದಿಂದ ಕಾಯುತ್ತಿದೆ. ನನ್ನ ಕುಟುಂಬದ ಹೊಸ ಮಗುವನ್ನು ಪರಿಚಯಿಸಲು ಖುಷಿಯಾಗುತ್ತಿದೆ. ಪೋರ್ಷಾ 911 ಕ್ಯಾರೆರಾ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಇದನ್ನೂ ಓದಿ: ಸ್ನಾನ ಮಾಡಲ್ಲವೆಂದು ಪತಿ ತಲಾಖ್ ನೀಡಿದ್ದಕ್ಕೆ ಠಾಣೆ ಮೆಟ್ಟಿಲೇರಿದ ಪತ್ನಿ!
ಈ ಕಾರಿನ ಬೆಲೆ 1.80 ಕೋಟಿ ರೂಪಾಯಿ ಇದೆ. ಟ್ಯಾಕ್ಸ್ ಮೊತ್ತ ಸೇರಿದರೆ ಎರಡು ಕೋಟಿ ರೂಪಾಯಿ ದಾಟಲಿದೆ. ಇಷ್ಟೋಂದು ಬೆಲೆ ಬಾಳುವ ಕಾರಿನ ಒಡತಿಯಾಗುವ ಮೂಲಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಿದ್ದಾರೆ.
ಮಮತಾ 2005ರಲ್ಲಿ ಚಿತ್ರರಂಗಕ್ಕೆ ಬಂದರು. ಮಯೂಖಮ್ ಅವರ ಮೊದಲ ಸಿನಿಮಾ. ಮಲಯಾಳಂನಲ್ಲಿ ಸಾಕಷ್ಟು ಚಿತ್ರ ಮಾಡಿದ ನಂತರ ಮಮತಾ ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟರು. 2008ರಲ್ಲಿ ತೆರೆಗೆ ಬಂದ ಸುದೀಪ್ ನಟನೆಯ ಗೂಳಿ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಂಡರು ಮಮತಾ. ಈ ಚಿತ್ರವೇ ಮೊದಲು ಮತ್ತು ಕೊನೆ. ನಂತರ ಅವರು ಕನ್ನಡಕ್ಕೆ ಮರಳಲೇ ಇಲ್ಲ. ಮಮತಾ ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ. ಮಮತಾಗೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 2014ರಿಂದ ಅಮೆರಿಕದ ಲಾಸ್ ಏಂಜಲೀಸ್‍ನಲ್ಲೇ ಅವರು ವಾಸವಾಗಿದ್ದಾರೆ. ಇದೀಗ ಬೆಲೆ ಬಾಳುವ ಹೊಸ ಕಾರನ್ನು ಖರೀದಿ ಮಾಡಿದ್ದಾರೆ.
ಮಮತಾ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಹಿಂದಿಯಲ್ಲಿ ತೆರೆಗೆ ಬಂದ ಅಂಧಾಧೂನ್ ಸಿನಿಮಾ ಇತ್ತೀಚೆಗೆ ತೆಲುಗಿಗೆ ರಿಮೇಕ್ ಆಗಿ ಮೆಚ್ಚುಗೆ ಪಡೆದುಕೊಂಡಿತ್ತು. ಈ ಸಿನಿಮಾ ಈಗ ಮಲಯಾಳಂನಲ್ಲೂ ತೆರೆಗೆ ಬರುತ್ತಿದೆ. ಹಿಂದಿಯಲ್ಲಿ ಟಬು ಮಾಡಿದ ಪಾತ್ರವನ್ನು ಮಮತಾ ಮಲಯಾಳಂನಲ್ಲಿ ನಿರ್ವಹಿಸುತ್ತಿದ್ದಾರೆ.