ಸೆಕ್ಸ್ ಸಿಂಬಲ್ ಅಂತ ಕರೆದರೆ ಬೇಸರವಿಲ್ಲ ಎಂದ ನಟಿ ಮಲೈಕಾ

Public TV
1 Min Read
Malaika Arora 1

ಬಾಲಿವುಡ್ (Bollywood ) ನಟಿ ಮಲೈಕಾ ಆರೋರ (Malaika Arora) ಬೋಲ್ಡ್ ಮಾತ್ರಗಳಿಂದಲೇ ಬಿಟೌನ್ ನಲ್ಲಿ ಫೇಮಸ್ ಆದವರು. ಅವರು ಧರಿಸುವ ಬಟ್ಟೆ ಕೂಡ ಅಷ್ಟೇ ಬೋಲ್ಡ್ ಆಗಿಯೇ ಇರುತ್ತದೆ. ಐವತ್ತರ ವಯಸ್ಸಿನಲ್ಲೂ ಮಲೈಕಾ ಸಖತ್ ಹಾಟ್ ಹಾಟ್ ಆಗಿ ಕಾಣುತ್ತಾರೆ. ಈ ನಟಿಗೆ 22ರ ವಯಸ್ಸಿನ ಮಗ ಕೂಡ ಇದ್ದಾನೆ. ಆದರೂ, ತುಂಡುಡುಗೆ ತೊಡುವುದನ್ನು ಮಾತ್ರ ನಿಲ್ಲಿಸಿಲ್ಲ.

Malaika Arora 4

ಯಾವುದೇ ಕಾರ್ಯಕ್ರಮವಿರಲಿ, ಜಿಮ್ ಗೆ ಹೋಗಲಿ, ಮನೆಯಿಂದ ಆಚೆ ಹೆಜ್ಜೆ ಇಟ್ಟರೆ ಸಾಕು ಅವರು ಹಾಕುವ ಬಟ್ಟೆಗಳು ಯಾವತ್ತಿಗೂ ತುಂಡು ತುಂಡು. ಈ ಕಾರಣಕ್ಕಾಗಿಯೇ ಮಲೈಕಾ ಅವರನ್ನು ಸೆಕ್ಸ್ ಸಿಂಬಲ್ ಗೆ ಹೋಲಿಸಿ ಟ್ರೋಲ್ ಮಾಡಲಾಗುತ್ತದೆ. ಈ ನಡೆ ಅವರಿಗೆ ಯಾವುದೇ ಕಾರಣಕ್ಕೂ ಬೇಸರ ತರಿಸಿಲ್ಲವಂತೆ. ಅವರೇ ಸಂದರ್ಶನದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

Malaika Arora 2

ನಾನು ಧರಿಸುವ ಬಟ್ಟೆಗಳ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ನನ್ನನ್ನು ಸೆಕ್ಸ್ ಸಿಂಬಲ್ ಅಂತ ಕರೆದರೂ ಕೋಪ ಬರುವುದಿಲ್ಲ. ಒಂದು ರೀತಿಯಲ್ಲಿ ನಾನು ಅದನ್ನು ಪಾಸಿಟಿವ್ ಆಗಿಯೇ ತಗೆದುಕೊಳ್ಳುತ್ತೇನೆ. ಇಂಡಸ್ಟ್ರಿಯಲ್ಲಿ ನಾನು ಮೂವತ್ತು ವರ್ಷಗಳಿಂದ ಇದ್ದೇನೆ ಅಂದರೆ, ಅದು ಕೇವಲ ಸೌಂದರ್ಯದಿಂದ ಮಾತ್ರವಲ್ಲ ಎಂದು ಹೇಳುವ ಮೂಲಕ ಕಾಸ್ಟ್ಯೂಮ್‍ ಬಗೆಗಿನ ತಕರಾರಿಗೆ ತೆರೆ ಎಳೆದಿದ್ದಾರೆ.

Malaika Arora 3

ಈ ಹಿಂದೆ ಮದುವೆ ವಿಚಾರದಲ್ಲೂ ಇಂಥದ್ದೇ ಬೋಲ್ಡ್ ಮಾತುಗಳನ್ನು ಆಡಿದ್ದರು. ಡಿವೋರ್ಸ್ ನಂತರ ತಮಗಿಂತಲೂ ಚಿಕ್ಕವಯಸ್ಸಿನ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅರ್ಜುನ್ ಜೊತೆ ಅನೇಕ ದೇಶಗಳನ್ನು ಸುತ್ತಿದ್ದಾರೆ. ಈ ವಿಷಯದಲ್ಲಿ ಅವರಿಗೆ ಯಾವುದೇ ವಿಷಾದವಿಲ್ಲ ಎಂದು ಅವರು ಮಾತನಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *