ಬಾಲಿವುಡ್ (Bollywood) ನಟಿ ಮಲೈಕಾ ಅರೋರಾ(Malaika Arora) ಮತ್ತು ಅರ್ಬಾಜ್ ಖಾನ್ (Arbaaz Khan) ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಮಗ ಅರ್ಹಾನ್‌ಗಾಗಿ ಮಾಜಿ ದಂಪತಿ ಮಲೈಕಾ, ಅರ್ಬಾಜ್ ಮುಂಬೈ ನಿಲ್ದಾಣದಲ್ಲಿ ಕಾದು ನಿಂತಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಮಲೈಕಾ ಮತ್ತು ಅರ್ಬಾಜ್ ಖಾನ್ (Arbaaz Khan) ಪ್ರೀತಿಸಿ, ಮದುವೆಯಾದ ಜೋಡಿ ಆದರೆ ಸಾಕಷ್ಟು ವೈಯಕ್ತಿಕ ಕಾರಣದಿಂದ 2017ರಲ್ಲಿ ಡಿವೋರ್ಸ್ ಪಡೆದು ದೂರವಾಗಿದ್ದರು. ಆದರೆ ಈಗ ಮಗನಿಗಾಗಿ ಮತ್ತೆ ಜೊತೆಯಾಗಿದ್ದಾರೆ. ಹೌದು.. ಅರ್ಹಾನ್ ಖಾನ್ (Arhaan Khan) ಪ್ರಸ್ತುತ ಯುಎಸ್‌ನಲ್ಲಿ ಚಲನಚಿತ್ರ ನಿರ್ಮಾಣದ ಕೋರ್ಸ್ ಅಧ್ಯಯನ ಮಾಡ್ತಿದ್ದಾರೆ. ಇದೀಗ ಭಾರತಕ್ಕೆ ಮರಳುತ್ತಿರುವ ಮಗನನ್ನ ಸ್ವಾಗತಿಸಲು ಮುಂಬೈ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ನಿಂತಿದ್ದಾರೆ.
View this post on Instagram
ಇವರಿಬ್ಬರ ಡಿವೋರ್ಸ್ ನಂತರ ಅರ್ಜುನ್ ಕಪೂರ್ ಜೊತೆ ಮಲೈಕಾ ಎಂಗೇಜ್ ಆಗಿದ್ದಾರೆ. ಆದರೆ ಅಸಮಾಧಾನವನ್ನೆಲ್ಲಾ ಪಕ್ಕಕ್ಕಿಟ್ಟು ಪೋಷಕರಾಗಿರುವ ಮಲೈಕಾ, ಅರ್ಬಾಜ್ ಮಗನಿಗಾಗಿ ಜೊತೆಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಮಗ ಬಂದ ತಕ್ಷಣ ಮಲೈಕಾ ತಬ್ಬಿ, ಮುದ್ದು ಮಾಡಿದ್ದಾರೆ. ತಂದೆ ಅರ್ಬಾಜ್ ನೋಡಿ, ನಗುತ್ತಾ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್
ಇಂತಹ ಪ್ರಬುದ್ಧ ಪೋಷಕರನ್ನ ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಮುನಿಸು ಮರೆತು ಮಗನಿಗಾಗಿ ಒಂದಾದ ಜೋಡಿಗೆ ಬಗೆ ಬಗೆಯ ಕಾಮೆಂಟ್ ಮಾಡುವ ಮೂಲಕ ಭೇಷ್ ಎಂದಿದ್ದಾರೆ.