ಮದುವೆ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಯದ್ವಾತದ್ವಾ ಟ್ರೋಲ್ ಆಗುತ್ತಿರುವ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಹೇಗೆ ಜೊತೆಯಾದರು ಎನ್ನುವ ಬಗ್ಗೆ ನಟಿ ಮಹಾಲಕ್ಷ್ಮಿ ರೊಮ್ಯಾಂಟಿಕ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮೊದಲು ಯಾರು, ಯಾರ ಹೃದಯ ಕದ್ದರು ಎನ್ನುವುದನ್ನೂ ಅವರು ಬಹಿರಂಗ ಪಡಿಸಿದ್ದಾರೆ. ಕದ್ದ ಹೃದಯವನ್ನು ಜೋಪಾನವಾಗಿ ಕಾಪಾಡಿಕೊಳ್ಳುವಂತೆಯೂ ತಿಳಿಸಿದ್ದಾರೆ.
Advertisement
ಮಹಾಲಕ್ಷ್ಮಿ ಅವರು ದುಡ್ಡಿನ ಆಸೆಗೆ ರವೀಂದರ್ ಅವರನ್ನು ಮದುವೆಯಾಗಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿತ್ತು. ಮಹಾಲಕ್ಷ್ಮಿ ಅವರೇ ಪ್ರಪೋಸ್ ಮಾಡಿರಬಹುದು ಎನ್ನುವ ಅನುಮಾನ ಕೂಡ ವ್ಯಕ್ತವಾಗಿತ್ತು. ಇವೆಲ್ಲವಕ್ಕೂ ಉತ್ತರ ಕೊಟ್ಟಿರುವ ನಟಿ, ಮೊದಲು ಪ್ರಪೋಸ್ ಮಾಡಿದ್ದು ರವೀಂದರ್ ಎಂದು ಹೇಳಿದ್ದಾರೆ. ಹಾಗಾಗಿ ‘ನನ್ನ ಹೃದಯವನ್ನು ಕದ್ದಿದ್ದೀರಿ. ಅದನ್ನು ಜೋಪಾನವಾಗಿ ನೋಡಿಕೊಳ್ಳಿ’ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಪ್ರೀ ವೆಡ್ಡಿಂಗ್ ಫೋಟೋಶೂಟ್ನಲ್ಲಿ ಮಿಂಚಿದ `ಕಮಲಿ’ ಖ್ಯಾತಿಯ ಗೇಬ್ರಿಯೆಲಾ- ಸುಹಾಸ್
Advertisement
Advertisement
ತಮಿಳು ಸಿನಿಮಾ ರಂಗದಲ್ಲಿ ನಿರ್ಮಾಪಕ ರವೀಂದರ್ ಮತ್ತು ನಟಿ ಮಹಾಲಕ್ಷ್ಮಿ ಮದುವೆ ವಿಚಾರ ಸಖತ್ ಸದ್ದು ಮಾಡಿದೆ. ಈ ಜೋಡಿಯ ಬಗ್ಗೆ ನಾನಾ ರೀತಿಯ ನೆಗೆಟಿಗ್ ಕಾಮೆಂಟ್ ಗಳು ಹರಿದು ಬರುತ್ತಿವೆ. ಇದೊಂದು ದುಡ್ಡಿನ ಆಸೆಗೆ ಆಗಿರುವ ವಿವಾಹ ಎಂದು ಗಾಸಿಪ್ ಹಬ್ಬಿಸಲಾಗಿದೆ. ಏನೇ ಗಾಸಿಪ್ ಗಳು ಬಂದರೂ, ದಂಪತಿ ಮಾತ್ರ ಖುಷಿ ಖುಷಿಯಾಗಿ ಇದ್ದಾರೆ.