ಮಂಗಳೂರು: ಕಿರುತೆರೆ ನಟಿಯ ಅತ್ಯಾಚಾರ ಹಾಗೂ ಬ್ಲಾಕ್ ಮೇಲ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಬೆಂಗಳೂರಿನ ದಯಾನಂದಸ್ವಾಮಿ ವಿರುದ್ಧ ಮಂಗಳೂರಿನಲ್ಲಿ ಎಫ್‍ಐಆರ್ ದಾಖಲಾಗಿದೆ. ಹುಣಸಮಾರನಹಳ್ಳಿ ಮಠದ ದಯಾನಂದಸ್ವಾಮಿ ವಿರುದ್ಧ ಕದ್ರಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮಂಗಳೂರಿನ ಜೆಎಂಎಫ್‍ಸಿ ಕೋರ್ಟ್ ಸೂಚನೆಯಡಿ ಎಫ್‍ಐಆರ್ ದಾಖಲಾಗಿದೆ.
ದಯಾನಂದ ಸ್ವಾಮೀಜಿ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ದಯಾನಂದ ಸ್ವಾಮಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಅಲ್ಲದೇ ವಿಡಿಯೋ ಮಾಡಿ ನಟಿಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪ ಕೇಳಿ ಬಂದಿತ್ತು. ಚಿಕ್ಕಮಗಳೂರಿನ ತೀರ್ಥಹಳ್ಳಿ ಮೂಲದ ಕಿರುತೆರೆ ನಟಿಯಿಂದ ದೂರು ದಾಖಲಾಗಿದ್ದು, ಮಂಗಳೂರು ಮೂಲಕ ಬೆಂಗಳೂರಿಗೆ ಕರೆದೊಯ್ದಿದ್ದ ಬಗ್ಗೆ ದೂರಿನಲ್ಲಿ ಉಲ್ಲೇಖವಾಗಿದೆ.
ಏನಿದು ಪ್ರಕರಣ?
ರಾಜ್ಯದ ಪ್ರತಿಷ್ಠಿತ ಮಠಗಳಲ್ಲೊಂದಾದ ಹುಣಸಮಾರನಹಳ್ಳಿಯ ಜಂಗಮ ಮಠದ ದಯಾನಂದ ಸ್ವಾಮಿ ರಾಸಲೀಲೆಯಲ್ಲಿ ನಟಿ ಕಾವ್ಯ ಆಚಾರ್ಯ ಭಾಗಿಯಾಗಿದ್ದರು. ದಯಾನಂದ್ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿರೋ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ರಾಸಲೀಲೆ ರಹಸ್ಯ ವಿಡಿಯೋವನ್ನು 2014 ಜನವರಿ 4 ರಂದು ಮಾಡಲಾಗಿತ್ತು. ನಂತರ ಈ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv