ಕರ್ನಾಟಕ ಚಲನಚಿತ್ರ ಕಲಾವಿದರ ಸಂಘವು ಹಿರಿಯ ನಟಿ ಲೀಲಾವತಿ (Leelavati) ಅವರ ನೆನಪಿನಲ್ಲಿ ಕಾರ್ಯಕ್ರಮ ನಡೆಸಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ ಹಿರಿಯ ನಟ, ಕಲಾವಿದರ ಸಂಘದ ಕಾರ್ಯದರ್ಶಿ ಸುಂದರ್ ರಾಜ್. ಲೀಲಾವತಿ ಅವರ 11ನೇ ದಿನದ ಕಾರ್ಯಕ್ಕೆ ಆಗಮಿಸಿದ ಸುಂದರ್ ರಾಜ್ (Sundar Raj), ‘ಹಿರಿಯ ನಟಿ ಲೀಲಾವತಿ ನೆನಪು ಅಮರವಾಗಿಸಲು ಕಲಾವಿದರ ಸಂಘ ಕಾರ್ಯಕ್ರಮ ಮಾಡಲು ನಿರ್ಧಾರ ಮಾಡಿದ್ದು, ಕಲ್ಲರಳಿ ಹೂವಾಗಿ ಅನ್ನೊ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಲೀಲಾವತಿ ಅವರು ಇಂತಹ ಕಲ್ಲು ಬಂಡೆಗಳ ಜಾಗದಲ್ಲೂ ಬರೀ ತೋಟ ಮಾತ್ರ ಮಾಡಿದ್ದಲ್ಲ, ಇದೇ ಜಾಗದಲ್ಲಿ ಬಂದು ಮನೆ ಕಟ್ಟಿದ್ದಾರೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬರನ್ನೂ ಈ ಜಾಗಕ್ಕೆ ಕರ್ಕೊಂಡು ಬಂದು ತೋರಿಸಿದ್ದಾರೆ. ಹೀಗಾಗಿ ಅವರ ನೆನಪನ್ನು ಅಮರವಾಗಿಸಲು ಪ್ಲಾನ್ ಮಾಡ್ತಿದೇವೆ’ ಎಂದಿದ್ದಾರೆ.
Advertisement
ಇಂದು ಬೆಳಗ್ಗೆಯಿಂದ ಲೀಲಾವತಿ ಅವರ 11ನೇ ದಿನದ ಸ್ಮರಣೆ ಕಾರ್ಯ ಅವರ ಮನೆಯಲ್ಲಿ ನಡೆಯುತ್ತಿದೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಮಗ ವಿನೋದ್ ರಾಜ್ ಮತ್ತು ಕುಟುಂಬ 11ನೇ ದಿನದ ಕಾರ್ಯವನ್ನು ನೆರವೇರಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಪೂಜೆ ಕಾರ್ಯಗಳು ಶುರುವಾಗಿದ್ದು, ನಟರಾದ ಸುಂದರ್ ರಾಜ್, ದೊಡ್ಡಣ್ಣ, ಪದ್ಮಾ ವಾಸಂತಿ, ಗಿರೀಜಾ ಲೋಕೇಶ್ ಸೇರಿದಂತೆ ಹಲವಾರು ಕಲಾವಿದರು ಇದರಲ್ಲಿ ಭಾಗಿಯಾಗಿದ್ದಾರೆ.
Advertisement
Advertisement
ಈ ಸಂದರ್ಭದಲ್ಲಿ ಮಾತನಾಡಿದ ನಟಿ ಗಿರೀಜಾ ಲೋಕೇಶ್, ‘ಶ್ರದ್ಧಾಂಜಲಿ ಅನ್ನೋದು ಭೂಮಿಯಲ್ಲಿ ಇರುವ ಪದ್ಧತಿ ಅಷ್ಟೇ. ಅವರ ಆತ್ಮ ಎಲ್ಲೂ ಹೋಗಿಲ್ಲ ಈ ತೋಟದಲ್ಲಿ ಸುತ್ತುತಿದೆ. ಚಿತ್ರರಂಗದ ಕಲಾವಿದರು ಅಮರರು, ಅವರಿಗೆ ಸಾವಿಲ್ಲ. ಒಂದು ಹೆಣ್ಣು ಹೇಗೆ ಬದುಕಬೇಕು ಅನ್ನೋದು ತೋರಿಸಿದ್ದಾರೆ ಲೀಲಮ್ಮ’ ಎಂದರು.
Advertisement
‘ಕನ್ನಡ ಚಿತ್ರರಂಗದಲ್ಲಿ ನನಗೆ ಅಕ್ಕ ಇರೋದು ಅಂದ್ರೆ ಲೀಲಾವತಿ. ಅವರ ಜೀವನವನ್ನ ಶ್ರೀಗಂಧಕ್ಕೆ ಹೋಲಿಸೋಕೆ ಇಷ್ಟ ಪಡ್ತೀನಿ. ಯಾಕಂದ್ರೆ ಇಟ್ಟರು ಸುಗಂಧದ ವಾಸನೆ, ಸುಟ್ಟರು ಸುಗಂಧದ ವಾಸನೆ. ವಿನೋದ್ ರಾಜ್ ಗು ಲೀಲಮ್ಮ ಗುಣ ಇದೆ. ಮನೆಗೆ ಬಂದ ಅತಿಥಿಗಳಿಗೆ ಊಟ ಮಾಡಿಸದೇ ಕಳಿಸಲ್ಲ. ಮಗನೇ ನಿನಗೆ ಊಟ ಇಲ್ಲ ಅಂದರೂ ಪರವಾಗಿಲ್ಲ ಬಂದವರಿಗೆ ಊಟ ಕೊಡಿ ಎಂದು ಲೀಲಾವತಿ ಹೇಳುತ್ತಿದ್ದರು. ಅದನ್ನೇ ಮಗನು ಮಾಡುತ್ತಿದ್ದಾನೆ ಎಂದರು ನಟ ದೊಡ್ಡಣ್ಣ.