ಬೆಂಗಳೂರು: ನೂರಾರು ವರ್ಷಗಳಿಂದ ರೈತರು ಉಳುಮೆ ಮಾಡುತ್ತಿರುವ ಕಂದಾಯ ಭೂಮಿಯನ್ನು ರೈತರು ತೆರವುಗೊಳಿಸಬೇಕೆಂದು ರಾಜ್ಯ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿರುವ ಹಿನ್ನೆಯಲ್ಲಿ ಸರ್ಕಾರದ ವಿರುದ್ಧ ಹಿರಿಯ ನಟಿ ಡಾ.ಲೀಲಾವತಿ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು.
ಇಂದು ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದಲ್ಲಿ ನಟ ವಿನೋದ್ ರಾಜ್ ಹಾಗೂ ಸ್ಥಳೀಯ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
Advertisement
ಈ ಹಿಂದೆ ಕೂಡ ಇದೇ ವಿಚಾರದಲ್ಲಿ ಪ್ರತಿಭಟನೆ ನಡೆಸಿದ್ದು, ಆಗ ಮಧ್ಯ ಪ್ರವೇಶ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಚಿವರು ಭೂಮಿ ಉಳಿಸಿಕೊಡುವುದಾಗಿ ಭರವಸೆಯನ್ನ ನೀಡಿದ್ದರು. ಆದರೆ ಕೆಲದಿನದ ಹಿಂದೆ ಒಬ್ಬೊಬ್ಬ ರೈತರಿಗೆ ರಾಜ್ಯ ಅರಣ್ಯ ಇಲಾಖೆ ಮತ್ತೆ ನೋಟಿಸ್ ಜಾರಿ ಮಾಡುರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
Advertisement
ಇಗಾಗಲೇ ನೂರಾರು ಮಂದಿಯ ಸುಮಾರು 950 ಎಕರೆ ಕಂದಾಯ ಭೂಮಿ ರೈತರ ಹೆಸರಿನಲ್ಲಿದ್ದು ಪಹಣಿಯಲ್ಲಿಯು ಸಹ ರೈತರ ಹೆಸರೇ ನಮೂದಾಗಿದೆ. ಆದರೆ ರಾಜ್ಯ ಅರಣ್ಯ ಇಲಾಖೆ ಇದು ಅರಣ್ಯ ಭೂಮಿ ಈ ಹಿಂದೆ ಮೈಸೂರು ಮಹಾರಾಜರು ಅರಣ್ಯ ಇಲಾಖೆಗೆ ನೀಡಿದ್ದಾರೆ. ಹೀಗಾಗಿ ರೈತರು ತಮ್ಮ ಸ್ವಾಧೀನದಲ್ಲಿರುವ ಭೂಮಿಯನ್ನು ತೆರವುಗೊಳಿಸಿ ರಾಜ್ಯ ಅರಣ್ಯ ಇಲಾಖೆಗೆ ಬಿಟ್ಟುಕೊಡುವಂತೆ ನೋಟಿಸ್ ಜಾರಿ ಮಾಡಿದೆ.
Advertisement
ಅರಣ್ಯ ಇಲಾಖೆಯ ಅಧಿಕಾರಿಗಳು ಪದೇ ಪದೆ ನೋಟಿಸ್ ಜಾರಿ ಮಾಡಿ ರೈತರನ್ನ ಅಲೆದಾಡಿಸುತ್ತಿದ್ದಾರೆ ಎಂದು ನಟಿ ಡಾ.ಲೀಲಾವತಿ ನೇತೃತ್ವದಲ್ಲಿ ನಟ ವಿನೋದ್ ರಾಜ್ ಹಾಗೂ ಸ್ಥಳೀಯ ರೈತರು ಆಕ್ರೋಶವನ್ನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.