Connect with us

Bengaluru City

ಉಗ್ರರಿಗೆ ತಕ್ಕ ಪಾಠ ಕಲಿಸಿ- ಕಣ್ಣೀರು ಹಾಕಿದ ಹಿರಿಯ ನಟಿ ಲೀಲಾವತಿ

Published

on

ಬೆಂಗಳೂರು: ಉಗ್ರರ ದಾಳಿಯಲ್ಲಿ ವೀರ ಯೋಧರ ಹುತಾತ್ಮ ಹಿನ್ನೆಲೆಯಲ್ಲಿ ಹಿರಿಯ ನಟಿ ಡಾ.ಲೀಲಾವತಿ ಉಗ್ರರಿಗೆ ತಕ್ಕ ಪಾಠ ಕಲಿಸಿ ಎಂದು ಕಣ್ಣೀರು ಹಾಕಿದ್ದಾರೆ.

ಡಾ. ಲೀಲಾವತಿ ತಮ್ಮ ತೋಟದ ಮನೆಯಲ್ಲಿ ಯೋಧರಿಗೆ ಮೊಂಬತ್ತಿ ಹಚ್ಚಿ ನಮನ ಸಲ್ಲಿಸಿದ್ದು, ವಿಡಿಯೋ ರೆಕಾರ್ಡ್ ಮಾಡಿ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಿಂದ ಮಾಹಿತಿ ರವಾನೆ ಮಾಡಿದ್ದಾರೆ. ಯೋಧರ ಮನೆಯವರ ಗೋಳಾಟ ನೋಡಿದರೆ ಏನು ಹೇಳಲು ಸಾಧ್ಯವಾಗುತ್ತಿಲ್ಲ. ಯೋಧ ಮಂಡ್ಯಕ್ಕೆ ಮಾತ್ರ ಗುರು ಅಲ್ಲ, ಇಡೀ ದೇಶಕ್ಕೆ ಶ್ರೇಷ್ಠ ಗುರುವಾಗಿದ್ದಾರೆ. ಅವರ ಪಾದ ಕಮಲಗಳಿಗೆ ನನ್ನ ನಮಸ್ಕಾರ ಎಂದು ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರು ಹರಿಸಿದ್ದಾರೆ.

ನಾವು ಇರುವುದು ಪುಣ್ಯಭೂಮಿಯಲ್ಲಿ, ಈ ಭೂಮಿಯಲ್ಲಿ ಮೊದಲು ಪಾಪಿಗಳನ್ನು ಹೋಗಲಾಡಿಸಿ. ಇಲ್ಲವಾದರೆ ನಾವು ಇನ್ನೂ ಎಷ್ಟು ಜನರನ್ನು ಕಳೆದುಕೊಳ್ಳಬೇಕಾಗುತ್ತದೆ. ಉಗ್ರರಿಗೆ ತಕ್ಕ ಪಾಠ ಕಲಿಸಿ. ಅವರನ್ನು ಸುಮ್ಮನೆ ಬಿಡಬಾರದು ಎಂದು ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.

ಯೋಧರು ಹೋಗುವಾಗ ಸರಿಯಾದ ಭದ್ರತೆ ಸಿಕ್ಕಿದಿದ್ದರೆ ಅವರು ಸಾಯುತ್ತಿರಲಿಲ್ಲವೇನೋ, ಯಾರು ಉದಾಸೀನ ಮಾಡಿದ್ದಾರೋ ಗೊತ್ತಿಲ್ಲ. ಆದರೆ ನಾವು ಅವರನ್ನು ಕಳೆದುಕೊಂಡಿದ್ದೇವೆ. ತ್ಯಾಗ ಮಾಡಿದ ಅವರಿಗೆ ದೇವರು ಕೊಡುವ ಶಿಕ್ಷೆ ಇದೇನಾ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಅವರ ಪತ್ನಿ, ಕುಟುಂಬದವರು ಕೊನೆಯವರೆಗೂ ಇದನ್ನು ನೆನಪಿಸಿಕೊಂಡು ಜೀವನ ಮಾಡಬೇಕಾಗುತ್ತದೆ ಎಂದು ದುಃಖ ವ್ಯಕ್ತಪಡಿಸಿದರು.

https://www.youtube.com/watch?v=H41kg81Fhgg

https://www.youtube.com/watch?v=Rkj4iQSjQN0

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Click to comment

Leave a Reply

Your email address will not be published. Required fields are marked *