ಕಿರುತೆರೆಯ ಹಿಟ್ ನಿರ್ದೇಶಕ ವಿನೋದ್ ದೊಂಡಾಳೆ (Vinod Dondale) ಜು.20ರಂದು ನೇಣಿಗೆ ಕೊರಳೊಡ್ಡಿದ್ದಾರೆ. ಇದೀಗ ನಿರ್ದೇಶಕ ವಿನೋದ್ ಅಂತಿಮ ದರ್ಶನ ಪಡೆದ ಬಳಿಕ ನಟಿ ಲಕ್ಷ್ಮಿ ಸಿದ್ದಯ್ಯ (Lakshmi Siddaiah) ಮಾತನಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರ ಅವರು ತಗೊಂಡಿದ್ದಾರೆ ಅಂದರೆ ನಂಬೋಕೆ ಆಗ್ತಿಲ್ಲ ಎಂದು ನಟಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ರೊಟ್ಟಿ ಮೇಲೆ ಉಗುಳಿದ ಅನ್ಯಕೋಮಿನ ವ್ಯಾಪಾರಿ; ರಾಮ-ಶಬರಿಗೆ ಹೋಲಿಸಿದ ಸೋನು ಸೂದ್ ವಿರುದ್ಧ ಆಕ್ರೋಶ
ವಿನೋದ್ ಸರ್ ಜೊತೆ ಕೆಲಸ ಮಾಡಿದ್ದು, ಇದೇ ಫಸ್ಟ್ ಪ್ರಾಜೆಕ್ಟ್ ‘ಗಂಗೆ ಗೌರಿ’ ಸೀರಿಯಲ್. ಆದರೆ ಅವರ ಬಗ್ಗೆ ತುಂಬಾ ವರ್ಷದಿಂದ ಕೇಳಿದ್ದೀನಿ. ಅವರು ಇಲ್ಲ ಅನ್ನೋದನ್ನು ನಂಬೋಕೆ ಆಗ್ತಿಲ್ಲ. ಅಷ್ಟು ಸರಳ ವ್ಯಕ್ತಿ. ನಮ್ಮಗಳ ಜೊತೆ ನಮ್ಮ ಹಾಗೆನೇ ಇರೋರು. ಡೈರೆಕ್ಟರ್ ಅನ್ನೋ ಭಾವನೆನೇ ಕೊಡ್ತಿರಲಿಲ್ಲ ಎಂದು ನಟಿ ಲಕ್ಷ್ಮಿ ಸಿದ್ದಯ್ಯ ಭಾವುಕರಾಗಿದ್ದಾರೆ.
ಅವರ ಜೊತೆ ಸೆಟ್‌ನಲ್ಲಿ ತುಂಬಾ ಜಗಳ ಮಾಡಿಕೊಂಡು ಕೆಲಸ ಮಾಡಿದ್ದೀನಿ. ನಮಗೆ ಆಗಲ್ಲ ಅಂದರೆ ಆಯ್ತು, ಸರಿ ಬಿಡಿ ಅಂತಾ ಹೇಳುತ್ತಿದ್ದರು. ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು ವಿನೋದ್ ಸರ್. ಈಗ ಅವರು ಹೀಗೆ ನಿರ್ಧಾರ ತಗೊಂಡಿದ್ದಾರೆ ಅಂದರೆ ನಂಬಲು ಕಷ್ಟ ಆಗ್ತಿದೆ ಎಂದಿದ್ದಾರೆ ನಟಿ ಲಕ್ಷ್ಮಿ.
ಇತ್ತೀಚೆಗೆ ‘ಗಂಗೆ ಗೌರಿ’ ಸೀರಿಯಲ್‌ಗಾಗಿ ಎಲ್ಲರೂ ಕಾಶಿಗೆ ಶೂಟಿಂಗ್ ಹೋಗಿದ್ದೆವು. ಅವರ ಜೊತೆ ಒಟ್ಟಿಗೆ ಕೆಲಸ ಮಾಡಿದ್ದೇವೆ. ಈ ವೇಳೆ, ಅವರ ಜೊತೆ ಕೆಲಸ ಮಾಡಿದ್ವಿ ಅನ್ನೋ ಫೀಲ್ ಕೊಡಲಿಲ್ಲ. ಎಲ್ಲರೂ ಜೊತೆಯಾಗಿ ಫ್ಯಾಮಿಲಿ ಟ್ರಿಪ್ ಹೋದ ಹಾಗೆ ಅನಿಸುತ್ತಿತ್ತು. ಅದೆಷ್ಟೋ ಜನರಿಗೆ ಅವರು ಬದುಕಿನ ದಾರಿ ಹೇಳಿ ಕೊಟ್ಟಿದ್ದಾರೆ. ವಿನೋದ್ ಸರ್ ರೀತಿಯ ವ್ಯಕ್ತಿ ಇಲ್ಲದೇ ಇರೋದು ಕಿರುತೆರೆ ಮತ್ತು ಹಿರಿತೆರೆಗೆ ದೊಡ್ಡ ನಷ್ಟ ಎಂದು ನಟಿ ಮಾತನಾಡಿದ್ದಾರೆ.
ಅಂದಹಾಗೆ, ನಿರ್ದೇಶಕ ವಿನೋದ್ ದೊಂಡಾಳೆ ಜು.20ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (ಜು.21) ಚಾಮರಾಜಪೇಟೆ ಟಿ.ಆರ್ ಮಿಲ್‌ನಲ್ಲಿ ವಿನೋದ್ ದೋಂಡಾಳೆ ಅಂತ್ಯಕ್ರಿಯೆ ನಡೆಯಲಿದೆ.