ಮಿಸ್ಟರಿ ಮ್ಯಾನ್ ಜೊತೆ ಕೃತಿ ಸನೋನ್ ಸೀಕ್ರೆಟ್ ಡೇಟಿಂಗ್

Public TV
1 Min Read
Kriti Sanon

ಬಾಲಿವುಡ್ (Bollywood) ಬೆಡಗಿ ಕೃತಿ ಸನೋನ್ (Kriti Sanon) ಅವರು ಆದಿಪುರುಷ್ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ, ಪ್ರಭಾಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಕೃತಿ ಬಗ್ಗೆ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ. ಪ್ರಭಾಸ್ (Prabhas) ಅಲ್ಲ, ವಿದೇಶದಲ್ಲಿ ಮಿಸ್ಟರಿ ಮ್ಯಾನ್ ಜೊತೆ ಕೈ ಕೈ ಹಿಡಿದು ಓಡಾಡಿದ್ದಾರೆ.

kriti sanonನಟಿ ಕೃತಿ ಸನೋನ್ ಶೂಟಿಂಗ್‌ಗೆ ಬ್ರೇಕ್ ಹಾಕಿ ಲಂಡನ್‌ಗೆ ಹಾರಿದ್ದಾರೆ. ಮಿಸ್ಟರಿ ಮ್ಯಾನ್ ಜೊತೆ ಸುಂದರ ಸಮಯ ಕಳೆಯುತ್ತಿದ್ದಾರೆ. ಲಂಡನ್ ಬೀದಿಗಳಲ್ಲಿ ನಿಗೂಢ ವ್ಯಕ್ತಿ ಜೊತೆ ಕೈ ಹಿಡಿದು ಓಡಾಡಿದ್ದಾರೆ. ಸದ್ಯ ಇಬ್ಬರು ಜೊತೆ ಇರುವ ಫೋಟೋ ವೈರಲ್ ಆಗಿದ್ದು, ಆ ಹುಡುಗ ಯಾರು ಎಂದು ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.

Kriti Sanonಕಬೀರ್ ಬಹಿಯಾ ಎಂಬುವರ ಜೊತೆ ಕೃತಿ ಲಂಡನ್ ಡೇಸ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗುತ್ತಿದ್ದು, ನಟಿಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಇದನ್ನೂ ಓದಿ:‘ಬೊಂಬೆ ಹೇಳುತೈತೆ’ ಸಾಂಗ್ ಕೇಳುತ್ತಿದ್ದಂತೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಣ್ಣೀರು

kritiಕಬೀರ್ ಬಹಿಯಾ ಅವರು ಲೆಜೆಂಡರಿ ಕ್ರಿಕೆಟಿಗ ಎಂಎಸ್ ಧೋನಿ ಅವರೊಂದಿಗೆ ಆಪ್ತ ಎನ್ನಲಾಗಿದೆ, ಧೋನಿ ಪತ್ನಿ ಸಾಕ್ಷಿ ಆಗಾಗ್ಗೆ ಕಬೀರ್ ಜೊತೆಗಿನ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದರು. ಕಬೀರ್ ಅವರು ಎಂಎಸ್ ಧೋನಿ ಪತ್ನಿಯ ಸಂಬಂಧಿ ಎನ್ನಲಾಗಿದೆ. ಈ ಕಬೀರ್ ಬಹಿಯಾ ಯುಕೆ ಮೂಲದ ಮಿಲಿಯನೇರ್ ಉದ್ಯಮಿ ಎಂದು ಹೇಳಲಾಗುತ್ತಿದೆ.

ಸದ್ಯ ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಮದುವೆ ಸಂಭ್ರಮ ಮುಗಿಲು ಮುಟ್ಟಿದೆ. ಕೃತಿ ಕರಬಂಧ ಮದುವೆ ಬೆನ್ನಲ್ಲೇ ಕೃತಿ ಸನೋನ್ ಮದುವೆ ಸುದ್ದಿ ಸಿಗುತ್ತಾ ಕಾಯಬೇಕಿದೆ.

Share This Article