ಬಾಲಿವುಡ್ ಬೆಡಗಿ ಕೃತಿ ಸನೋನ್ (Kriti Sanon) ಪಡ್ಡೆಹುಡುಗರಿಗೆ ಬ್ಯಾಡ್ ನ್ಯೂಸ್ ಕೊಟ್ಟಿದ್ದಾರೆ. ಉದ್ಯಮಿ ಕಬೀರ್ ಜೊತೆ ಕೃತಿ ಮದುವೆ ಎಂದು ಸುದ್ದಿಯೊಂದು ಹೊರಬಿದ್ದಿದೆ. ಸದ್ಯದಲ್ಲೇ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ (Wedding) ಕಾಲಿಡಲು ತಯಾರಿ ಮಾಡಿಕೊಳ್ತಿದ್ದಾರೆ ಎಂಬ ಸುದ್ದಿಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Advertisement
‘ಆದಿಪುರುಷ್’ ಹೀರೋಯಿನ್ ಕೃತಿ ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ಖಾಸಗಿ ವಿಚಾರವಾಗಿಯೇ ಭಾರೀ ಸುದ್ದಿಯಾಗ್ತಿದ್ದಾರೆ. ಸದ್ಯ ಉದ್ಯಮಿ ಕಬೀರ್ ಬಹಿಯಾ ಜೊತೆ ನಟಿ ಡೇಟಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗೆ ಬಾಯ್ಫ್ರೆಂಡ್ ಜೊತೆ ಗ್ರೀಸ್ನಲ್ಲಿ ಕೃತಿ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಇದು ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇದನ್ನೂ ಓದಿ:ಜ್ಯೂ.ಎನ್ಟಿಆರ್ ಫ್ಯಾನ್ಸ್ಗೆ ಸಿಹಿಸುದ್ದಿ- ಆ.5ರಂದು ಹೊರಬೀಳಲಿದೆ ‘ದೇವರ’ ಚಿತ್ರದ ಅಪ್ಡೇಟ್
Advertisement
Advertisement
ಈಗ ಲೇಟೆಸ್ಟ್ ವಿಚಾರ ಏನೆಂದರೆ, 4500 ಕೋಟಿ ಒಡೆಯ ಕಬೀರ್ ಜೊತೆ ಮದುವೆಗೆ ನಟಿ ಸಜ್ಜಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಡೇಟಿಂಗ್ ವಿಷ್ಯ ಹೊರಬಿದ್ದ ಬೆನ್ನಲ್ಲೇ ಕೃತಿ ಮದುವೆ ಬಗ್ಗೆ ಗುಸು ಗುಸು ಶುರುವಾಗಿದೆ.
Advertisement
ಎಂ.ಎಸ್ ಧೋನಿ ದಂಪತಿ ಜೊತೆ ಉತ್ತಮ ಒಡನಾಟ ಹೊಂದಿರುವ ಕಬೀರ್ ಬಹಿಯಾ ಅವರ ಕುಟುಂಬದ ಆಸ್ತಿಯ ಮೌಲ್ಯ 4500 ಕೋಟಿ ರೂ. ಎನ್ನಲಾಗಿದೆ. ಶ್ರೀಮಂತ ಕುಟುಂಬಗಳಲ್ಲಿ ಬಹಿಯಾ ಫ್ಯಾಮಿಲಿ ಕೂಡ ಒಂದಾಗಿದ್ದು, ಈ ಮನೆಗೆ ನಟಿ ಸೊಸೆಯಾಗ್ತಾರೆ ಎನ್ನಲಾಗಿದೆ. ಈ ಸುದ್ದಿ ನಿಜನಾ? ಎಂದು ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.
ಅಂದಹಾಗೆ, ಕಳೆದ ವರ್ಷ ‘ಬಾಹುಬಲಿ’ ಹೀರೋ ಪ್ರಭಾಸ್ (Prabhas) ಜೊತೆ ಕೃತಿ ಸನೋನ್ ಹೆಸರು ಕೇಳಿ ಬಂದಿತ್ತು. ಇನ್ನೇನು ಮದುವೆ ಆಗಿಯೇ ಬಿಡುತ್ತಾರೆ ಎಂದೇ ಹೇಳಲಾಗಿತ್ತು. ಆ ಮೇಲೆ ಈ ವಿಚಾರ ಸುಳ್ಳು ಎಂದು ಎಲ್ಲರ ಅರಿವಿಗೆ ಬಂದಿತ್ತು.