ಕನ್ನಡದ ಕ್ಷಣ ಕ್ಷಣ, ಗನ್, ಮಾಣಿಕ್ಯ (Maanikya) ಸಿನಿಮಾಗಳ ಮೂಲಕ ಪರಿಚಿತರಾದ ನಟಿ ಕಿರಣ್ ರಾಥೋಡ್ (Kiran Rathod) ಇದೀಗ ತೆಲುಗಿನ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ದೊಡ್ಮನೆ ಆಟಕ್ಕೆ ಯಾರೆಲ್ಲಾ ಭಾಗಿಯಾಗುತ್ತಾರೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಬಿಗ್ ಬಾಸ್ ಮನೆಗೆ (Bigg Boss House) ಹಾಟ್ ನಟಿ ಕಿರಣ್ ಎಂಟ್ರಿ ಕೊಟ್ಟಿದ್ದಾರೆ.
ತೆಲುಗಿನ ಎವರ್ ಗ್ರೀನ್ ನಟ ನಾಗಾರ್ಜುನ (Nagarjuna) ನಿರೂಪಣೆಯ ತೆಲುಗು ಬಿಗ್ ಬಾಸ್ ಸೀಸನ್ 7ಕ್ಕೆ ಸೆ.3ರಂದು ಚಾಲನೆ ಸಿಕ್ಕಿದೆ. ಕನ್ನಡದ ಮಾಣಿಕ್ಯ ಚಿತ್ರದ ನಟಿ ಕಿರಣ್ ಬಿಗ್ ಬಾಸ್‌ನಲ್ಲಿದ್ದಾರೆ. ಜೊತೆಗೆ ಶಕೀಲಾ, ಅಗ್ನಿಸಾಕ್ಷಿ ನಟಿ ಶೋಭಾ ಶೆಟ್ಟಿ, ಪ್ರಿಯಾಂಕ ಜೈನ್, ಶಿವಾಜಿ, ದಾಮಿನಿ, ಸಂದೀಪ್, ನಟ ಗೌತಮ್ ಕೃಷ್ಣ ಸೇರಿದಂತೆ ಹಲವರು ಭಾಗಿದ್ದಾರೆ.
ಈ ಸೀಸನ್ ಎಲ್ಲವೂ ಉಲ್ಟಾ ಪಲ್ಟಾ ನೀವು ಅಂದುಕೊಂಡಂತೆ ಇರಲ್ಲ ಅಂತಾ ನಾಗಾರ್ಜುನ ಈಗಾಗಲೇ ಕುತೂಹಲ ಕೆರಳಿಸಿದ್ದಾರೆ. ಟಾಸ್ಕ್, ಮನೆಯ ಮಾದರಿ, ಎಲ್ಲವೂ ಕೊಂಚ ಡಿಫರೆಂಟ್ ಆಗಿಯೇ ಇರಲಿದೆ ಎಂದು ಸುಳಿವು ಈಗಾಗಲೇ ನೀಡಿದ್ದಾರೆ. ಇದನ್ನೂ ಓದಿ:‘ಅರ್ಜುನ್ ರೆಡ್ಡಿ’ ನಿರ್ದೇಶಕನ ಸಿನಿಮಾದಲ್ಲಿ ವಿಜಯ್ ದೇವರಕೊಂಡ
ನಿನ್ನೆ (ಸೆ.3) ಎಪಿಸೋಡ್ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮದಲ್ಲಿ ಖುಷಿ (Kushi) ಪ್ರಚಾರ ಕಾರ್ಯಕ್ಕೆ ವಿಜಯ್ ದೇವರಕೊಂಡ(Vijay Devarakonda) ಬಂದಿದ್ದರು. ಆಗ ವಿಜಯ್ ಬಳಿ ಸಮಂತಾ ಎಲ್ಲಿ ಎಂದು ನಾಗಾರ್ಜುನ ಕೇಳಿದ್ದು, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]