ಬಾಲಿವುಡ್ ನ ಹೆಸರಾಂತ ನಟಿ, ರಾಜಕಾರಣಿ ಕಿರಣ್ ಖೇರ್ (Kiran Kher) ಕೋವಿಡ್ ನಿಂದಾಗಿ ಆಸ್ಪತ್ರೆ ಸೇರಿದ್ದಾರೆ. ನಿನ್ನೆಯಷ್ಟೇ ಅವರು ಟೆಸ್ಟ್ ಮಾಡಿಸಿಕೊಂಡಿದ್ದು, ಕೋವಿಡ್ (Covid) ಪಾಸಿಟಿವ್ (Positive) ಬಂದಿದೆ. ಹಾಗಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದು, ತಮ್ಮ ಸಂಪರ್ಕದಲ್ಲಿ ಇದ್ದವರು ಟೆಸ್ಟ್ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
Advertisement
ಕಿರಣ್ ಖೇರ್ ತಮಗೆ ಕೊರೊನಾ (Corona) ಪಾಟಿಸಿವ್ ಬಂದಿರುವ ಕುರಿತು ಮಾಹಿತಿ ನೀಡುತ್ತಿದ್ದಂತೆಯೇ ಬಾಲಿವುಡ್ ನಲ್ಲಿ ಮತ್ತೆ ಆತಂಕ ಶುರುವಾಗಿದೆ. ಕೋವಿಡ್ ಕಾರಣದಿಂದಾಗಿ ಈಗಾಗಲೇ ತತ್ತರಿಸಿ ಹೋಗಿದ್ದ ಬಾಲಿವುಡ್, ಇತ್ತೀಚೆಗೆ ಚೇತರಿಸಿಕೊಂಡಿದೆ. ಮತ್ತೆ ಕೊರೊನಾ ಹರಡಿ, ಇನ್ನೇನು ಆಗತ್ತೋ ಅನ್ನುವ ಆತಂಕ ಬಿಟೌನನದ್ದು. ಹಾಗಾಗಿ ಕಿರಣ್ ಅವರಿಗೆ ಅನೇಕರು ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ : ನಟನ ನಿವಾಸಕ್ಕೆ ಫುಲ್ ಸೆಕ್ಯೂರಿಟಿ
Advertisement
Advertisement
ಬಾಲಿವುಡ್ ನಟ ಅನುಪಮ್ ಖೇರ್ ಅವರ ಪತ್ನಿ ಕಿರಣ್ ಖೇರ್. ನಟಿಯಾಗಿ, ರಿಯಾಲಿಟಿ ಶೋ ತೀರ್ಪುಗಾರರಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡವರು. ಹಿಂದಿಯಲ್ಲಿ ಇವರಿಗೆ ಪ್ರೀತಿಯಿಂದ ಸರ್ವೋತ್ಕೃಷ್ಟ ತಾಯಿ ಎಂದೇ ಕರೆಯಲಾಗುತ್ತದೆ. ಅನೇಕ ಸ್ಟಾರ್ ಗಳಿಗೆ ತಾಯಿ ಪಾತ್ರ ಮಾಡಿದ ಹೆಗ್ಗಳಿಕೆ ಕಿರಣ್ ಅವರದ್ದು.