ಕೇಡಿ ಲೇಡಿಯಾಗಿ ಅಬ್ಬರಿಸಲಿದ್ದಾರೆ ಕಿಯಾರಾ ಅಡ್ವಾಣಿ

Public TV
1 Min Read
kiara advani

ಬಾಲಿವುಡ್ (Bollywood) ಗ್ಲ್ಯಾಮರಸ್ ನಟಿ ಕಿಯಾರಾ ಅಡ್ವಾಣಿ (Kiara Advani) ಅವರು ಹೊಸ ಬಗೆಯ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಒಂದು ಸಿನಿಮಾದಿಂದ ಮತ್ತೊಂದು ಚಿತ್ರದಲ್ಲಿ ವಿಭಿನ್ನ ರೋಲ್‌ಗಳನ್ನ ಮಾಡ್ತಿದ್ದಾರೆ. ಈಗ ಅವರು ವಿಲನ್ ಆಗಿ ಮಿಂಚಲು ಸಜ್ಜಾಗಿದ್ದಾರೆ. ಇಲ್ಲಿದೆ ಅಪ್‌ಡೇಟ್

kiara advani

ಮದುವೆಯಾದ್ಮೇಲೂ ಕಿಯಾರಾ (Kiara Advani) ನಾಯಕಿಯಾಗಿ ಮಿಂಚ್ತಿದ್ದಾರೆ. ಹೀಗಿರುವಾಗ ಡಾನ್ 3 (Don 3) ಚಿತ್ರದಲ್ಲಿ ಲೇಡಿ ವಿಲನ್ ಆಗಿ ಮಿಂಚಲು ಸಜ್ಜಾಗಿದ್ದಾರೆ. ಹೀರೋ ರಣ್‌ವೀರ್ ಸಿಂಗ್‌ಗೆ ಕೇಡಿ ಲೇಡಿಯಾಗಲು ಹೊರಟಿದ್ದಾರೆ. ಇದನ್ನೂ ಓದಿ:ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತಸದ ಸುದ್ದಿ

kiara advani3

ಈ ಹಿಂದೆ ‘ಡಾನ್ 2’ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಪೊಲೀಸ್ ಪಾತ್ರ ಮಾಡಿದರೆ ಶಾರುಖ್ ಖಾನ್ (Sharukh Khan) ಅವರು ಡಾನ್ ಪಾತ್ರದಲ್ಲಿ ಗಮನ ಸೆಳೆದಿದ್ದರು. ‘ಡಾನ್ 3’ (Don 3) ಚಿತ್ರದಲ್ಲಿ ಪಾತ್ರವರ್ಗ ಬದಲಾಗುತ್ತಿದೆ. ಶಾರುಖ್ ಖಾನ್ ಬದಲು ರಣವೀರ್ ಸಿಂಗ್ (Ranveer Singh) ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಕಿಯಾರಾಗೆ ಪ್ರಮುಖ ಪಾತ್ರವೊಂದನ್ನು ನೀಡಿದ್ದಾರೆ.

kiara advani 1

ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಹಾಲಿವುಡ್‌ನಲ್ಲಿ ಸೆಟಲ್ ಆಗಿದ್ದಾರೆ. ಅವರು ಬಾಲಿವುಡ್‌ಗೆ ಮರಳುವುದು ಅನುಮಾನ. ಹೀಗಾಗಿ ಅವರು ಮಾಡಿದ್ದ ರೋಮಾ ಪಾತ್ರಕ್ಕೆ ಮತ್ತೊಬ್ಬರ ಆಯ್ಕೆ ನಡೆಯಬೇಕಿದೆ. ಈಗ ಕಿಯಾರಾ ಮಾಡುತ್ತಿರುವುದು ರೋಮಾ ಪಾತ್ರ ಅಲ್ಲ ಎನ್ನಲಾಗುತ್ತಿದೆ. ಈ ಎಲ್ಲಾ ವಿಚಾರಗಳಿಗೆ ಚಿತ್ರತಂಡದಿಂದಲೇ ಸ್ಪಷ್ಟನೆ ಸಿಗಬೇಕಿದೆ.

ಕಿಯಾರಾ ಅಡ್ವಾಣಿ ಅವರು ವಿಲನ್ ರೀತಿಯ ಪಾತ್ರಗಳನ್ನು ಈವರೆಗೆ ನಿರ್ವಹಿಸಿಲ್ಲ. ಹೀಗಾಗಿ, ಅವರು ಈ ಪಾತ್ರ ಒಪ್ಪಿಕೊಂಡಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಸೃಷ್ಟಿ ಆಗಿದೆ. ಅವರು ಈ ಚಿತ್ರದ ಮೂಲಕ ಹೊಸ ರೀತಿಯಲ್ಲಿ ಪ್ರೇಕ್ಷಕರ ಎದುರು ಬರಲು ರೆಡಿ ಆಗುತ್ತಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article