ಬಾಲಿವುಡ್‌ನ (Bollywood) ಕ್ಯೂಟ್ ಕಪಲ್ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹನಿಮೂನ್ ಮುಗಿಸಿ ಇದೀಗ ಮತ್ತೆ ಕೆಲಸದಲ್ಲಿ ಆಕ್ಟೀವ್ ಆಗಿರುವ ಕಿಯಾರಾ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.
`ಶೇರ್ಷಾ’ ಚಿತ್ರದ ಮೂಲಕ ಜನಪ್ರಿಯ ಜೋಡಿಯಾಗಿ ಸಿದ್-ಕಿಯಾರಾ ಹೈಲೆಟ್ ಆದರು. ಈ ಸಿನಿಮಾದ ಚಿತ್ರೀಕರಣದಲ್ಲಿಯೇ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟರು. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾದರು. ಇದನ್ನೂ ಓದಿ: ದೇಶ ಗೆದ್ದ ಗೃಹಿಣಿಯ ಕಥೆ ಹೇಳಲು ಬರುತ್ತಿದ್ದಾರೆ ಅನುಪಮ

ಇನ್ನೂ ರಾಮ್ ಚರಣ್ ನಟನೆಯ 15ನೇ ಸಿನಿಮಾಗೆ ಕಿಯಾರಾ (Kiara Advani) ನಾಯಕಿಯಾಗಿದ್ದಾರೆ. ಕರಣ್ ಜೋಹರ್ (Karan Johar) ನಿರ್ಮಾಣ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಿಗೆ ಸಿದ್ಧಾರ್ಥ್ ಮಲ್ಹೋತ್ರಾಗೆ ಕಿಯಾರಾ ನಾಯಕಿ ಎಂದು ಹೇಳಲಾಗುತ್ತಿದೆ.



