ನಾನು ಚಡ್ಡಿ ಹಾಕಿದ್ನಾ.. ಇಲ್ವಾ ಅಂತ ಬಂದು ನೋಡಿದ್ರಾ? – ನೆಟ್ಟಿಗರ ಕಾಮೆಂಟ್‌ಗೆ ಖುಷಿ ಮುಖರ್ಜಿ ಬೋಲ್ಡ್‌ ಉತ್ತರ

Public TV
2 Min Read
Khushi Mukherjee

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್‌ ಆಗಿರುವ ಬಹುಭಾಷಾ ನಟಿ ಖುಷಿ ಮುಖರ್ಜಿ (Khushi Mukherjee) ಇತ್ತೀಚೆಗೆ ಒಳ ಉಡುಪು ಕಾಣುವಂತಹ ಹಾಟ್‌ ವಿಡಿಯೋ ವೊಂದನ್ನ ಹಂಚಿಕೊಂಡಿದ್ದರು. ಇದರ ಫೋಟೋಗಳು ವೈರಲ್‌ ಆಗ್ತಿದಂತೆ ನಟಿಯ ಬಗ್ಗೆ ನಾನಾ ರೀತಿ ಕಾಮೆಂಟ್‌ಗಳು ಬರ್ತಿದ್ದವು, ಅಲ್ಲದೇ ನೀವು ಒಳ ಉಡುಪು ಧರಿಸಿದ್ದೀರಾ ಅಂತ ಕೆಲ ನೆಟ್ಟಿಗರು ಪ್ರಶ್ನೆ ಕೇಳಿದ್ದರು. ಇದೆಲ್ಲದಕ್ಕೂ ನಟಿ ಉತ್ತರ ಕೊಡೋ ಕೆಲಸ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ, ನಾನು ಚಡ್ಡಿ ಹಾಕಿದ್ದೀನಾ.. ಇಲ್ವಾ ಅಂತ ನೀವು ಬಂದು ನೋಡಿದ್ರಾ? ಆ ಬಟ್ಟೆಯಲ್ಲಿ ನಾನು ಚಡ್ಡಿ ಹಾಕಿರಲ್ಲ, ಬದಲಿಕೆ ಥಾಂಗ್ಸ್‌ (ಮಹಿಳೆಯರ ಒಳಉಡುಪು) ಹಾಕಿದ್ದೆ. ಅದನ್ನ ಮೇಲೆ ಕಟ್ಟಿದ್ದರಿಂದ ಹಾಕಿರೋದು ಕಾಣ್ತಿರಲಿಲ್ಲ ಅದಕ್ಕೆ ಕೀಳಾಗಿ ಮಾತನಾಡೋದು ಎಷ್ಟು ಸರಿ ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ

khushi mukherjee

ಮುಂದುವರಿದು.. ನಾನು ಆ ಡ್ರೆಸ್‌ನಲ್ಲಿ ಅನ್‌ಕಂಫರ್ಟ್‌ ಆಗಿರಲಿಲ್ಲ. ಒಂದು ಕಡೆ ಕೈ, ಮತ್ತೊಂದು ಕಡೆ ತೊಡೆ ಕಾಣಿಸುವಂತೆ ಡ್ರೆಸ್‌ ಹಾಕಿದ್ದೆ. ಜೊತೆಗೆ ಎಷ್ಟು ತೋರಿಸಬೇಕು? ಎಷ್ಟು ತೋರಿಸಬಾರದು ಎಲ್ಲವೂ ನನಗೆ ಗೊತ್ತಿತ್ತು. ಆದ್ರೆ ಯಾವನೋ ಒಬ್ಬ ಕುಡುಕ ಒಂದು ಕಾಮೆಂಟ್‌ ಪಾಸ್‌ ಮಾಡಿದ, ಅದಕ್ಕೆ ಎಲ್ಲರೂ ಸಪೋರ್ಟ್‌ ಮಾಡಿ ಟ್ರೋಲ್‌ ಮಾಡೋಕೆ ಶುರು ಮಾಡಿದ್ರು ಅಂತ ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: ಒಳಉಡುಪು ಧರಿಸದೇ ಪೋಸ್‌ ಕೊಟ್ಟ ಖುಷಿ ಮುಖರ್ಜಿ – ಅದೆಷ್ಟು ಬಾರಿ ಎದೆಗೆ ಬೆಂಕಿ ಹಚ್ತೀರಿ ಅಂದ್ರು ಫ್ಯಾನ್ಸ್‌

khushi mukherjee 2

ಇತ್ತೀಚೆಗೆ ಮುಂಬೈನಲ್ಲಿ (Mumbai) ಕಾರ್ಯಕ್ರಮವೊಂದಕ್ಕೆ ಒಳಉಡುಪು ಧರಿಸದೇ ಇರೋದು ಕಾಣಿಸುವಂತಹ ಟ್ರಾನ್ಸ್‌ಪರೆಂಟ್‌ ಡ್ರೆಸ್‌ ತೊಟ್ಟು ಫೋಟೋಗೆ ಪೋಸ್‌ ಕೊಟ್ಟಿದ್ದರು. ಅದಕ್ಕೂ ಮುನ್ನ ಗೋಲ್ಟನ್‌ ಕಲ್ಲರ್‌ ತುಂಡು ಬಟ್ಟೆ ಧರಿಸಿದ್ದ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಕಣ್ಣುಕುಕ್ಕುವಂತೆ ಮಾಡಿತ್ತು. ಕೆಲ ನೆಟ್ಟಿಗರು ನಟಿಯ ಬೋಲ್ಡ್‌ ಅವತಾರಕ್ಕೆ ʻವಾವ್‌ ಎಷ್ಟು ಸೆಕ್ಸಿʼ ಅಂತಾ ಕಾಮೆಂಟ್‌ ಮಾಡಿದ್ರೆ ಇನ್ನೂ ಕೆಲವರು ಇನ್ನೂ ಸ್ವಲ್ಪ ಚೋಟುದ್ದ ಡ್ರೆಸ್‌ ತೊಟ್ಟಿದ್ರೆ ಮಜಾ ಇರ್ತಿತ್ತು, ನಾನೇ ಒಳಉಡುಪು ಕೊಡಿಸಲೇ? ಅಂತೆಲ್ಲಾ ಕಾಮೆಂಟ್‌ ಮಾಡಿದ್ದರು. ಇನ್ನೂ ಕೆಲವರು ನಟಿಯನ್ನ ಟ್ರೋಲಿಗೆಳೆದಿದ್ದರು.

ಸಹಜವಾಗಿ ಚಿತ್ರ ನಟಿಯರು ಫಂಕ್ಷನ್​ಗಳಿಗೆ ಹೋಗುವಾಗ.. ರೆಡ್​ ಕಾರ್ಪೆಟ್​ ಮೇಲೆ ನಡೆಯುವಾಗ ಅವರ ಡ್ರೆಸ್​ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್​ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್​ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇನ್ನೂ ಕೆಲ ನಟಿಯರಿಗೆ ಮೈಮೇಲೆ ಬಟ್ಟೆಯೇ ನಿಲ್ಲುವುದಿಲ್ಲ ಎನ್ನುವಂತಹ ಡ್ರೆಸ್‌ ತೊಟ್ಟು ಟ್ರೋಲಿಗೆ ಒಳಗಾಗ್ತಾರೆ. ಖುಷಿ ಮುಖರ್ಜಿಯ ವಿಷಯದಲ್ಲೂ ಅದೇ ಆಗಿತ್ತು.

Share This Article