ನಿರ್ಮಾಪಕ ಬೋನಿ ಕಪೂರ್- ನಟಿ ಶ್ರೀದೇವಿ (Sridevi) ದಂಪತಿ ಪುತ್ರಿ ಜಾನ್ವಿ ಕಪೂರ್ ಇದೀಗ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ನಾಯಕಿಯಾಗಿ ಗುರುತಿಸಿಕೊಳ್ತಿದ್ದಾರೆ. ಇದೀಗ ಜಾನ್ವಿ ಸಹೋದರಿ ಖುಷಿ ಕಪೂರ್ (Kushi Kapoor) ಕೂಡ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸ್ಟಾರ್ ನಟರ ಮಕ್ಕಳಿಗೆ ಖುಷಿ ನಾಯಕಿಯಾಗಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ ಹೊಸ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ
ತಾಯಿ ಶ್ರೀದೇವಿಯಂತೆ ದೊಡ್ಡ ನಟಿಯಾಗಿ ಗುರುತಿಸಿಕೊಳ್ಳಬೇಕು ಅಂತ ಜಾನ್ವಿ, ಖುಷಿ ಕಪೂರ್ ಕೂಡ ಅದೇ ಹಾದಿಯಲ್ಲಿ ಹೆಜ್ಜೆ ಇಡ್ತಿದ್ದಾರೆ. ಸ್ಟಾರ್ ನಟರ ಮಕ್ಕಳ ಜೊತೆ ಖುಷಿ ಕಪೂರ್ ರೊಮ್ಯಾನ್ಸ್ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
‘ದಿ ಆರ್ಚೀಸ್’ ಸಿನಿಮಾ ಮೂಲಕ ನಟನೆಗೆ ಖುಷಿ ಕಪೂರ್ ಎಂಟ್ರಿ ಕೊಟ್ಟರು. ಈಗ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್‌ಗೆ ಖುಷಿ ನಾಯಕಿಯಾಗಿದ್ದಾರೆ. ಆಮೀರ್ ಖಾನ್ ಪುತ್ರ ಜುನೈದ್ ಖಾನ್ (Junaid Khan) ನಟನೆಯ ಹೊಸ ಸಿನಿಮಾಗೂ ಖುಷಿ ಹೀರೋಯಿನ್ ಆಗಿ ಫೈನಲ್ ಆಗಿದ್ದಾರೆ.
ಕರಣ್ ಜೋಹರ್ (Karan Johar) ನಿರ್ಮಾಣದ ‘ನಾದನಿಯಾನ್’ ಸಿನಿಮಾದಲ್ಲಿ ಇಬ್ರಾಹಿಂ ಅಲಿ ಖಾನ್- ಖುಷಿ ಕಪೂರ್ ಜೋಡಿಯಾಗಿ ನಟಿಸುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿದೆ.
View this post on Instagram
ತಮಿಳಿನ ‘ಲವ್ ಟುಡೇ’ ಎಂಬ ಸಿನಿಮಾ ಹಿಂದೆಗೆ ರಿಮೇಕ್ ಆಗುತ್ತಿದೆ. ಈ ಚಿತ್ರಕ್ಕೆ ಜುನೈದ್ ಖಾನ್- ಖುಷಿ ಕಪೂರ್ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಎರಡು ಬಿಗ್ ಬಜೆಟ್ ಸಿನಿಮಾಗಳ ಆಫರ್ ಖುಷಿ ಕಪೂರ್ ಪಾಲಾಗಿದೆ.
ಬಾಲಿವುಡ್‌ನಲ್ಲಿ ಖುಷಿ ಕಪೂರ್ ನಾಯಕಿಯಾಗಿ ಮುಂದಿನ ದಿನಗಳಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ತಾರಾ ಕಾದುನೋಡಬೇಕಿದೆ.