ಕನ್ನಡದ ರಣಧೀರ, ಅಂಜದ ಗಂಡು ಸಿನಿಮಾಗಳಲ್ಲಿ ನಟಿಸಿರುವ ಖುಷ್ಬೂ ಸುಂದರ್ (Khushbu Sundar) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಬೋಲ್ಡ್ ಫೋಟೋ ಹಂಚಿಕೊಂಡಿದ್ದ ನಟಿಗೆ ಕಾಮೆಂಟ್ ಮೂಲಕ ಕಾಲೆಳೆದಿದ್ದಾನೆ. ಕೆಣಕಿದ ನೆಟ್ಟಿಗನಿಗೆ ಸರಿಯಾದ ತಿರುಗೇಟು ನೀಡಿದ್ದಾರೆ ಖುಷ್ಬೂ. ಇದನ್ನೂ ಓದಿ:‘ಸಿಕಂದರ್’ ಸೋಲಿನ ಬೆನ್ನಲ್ಲೇ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ
What a pain people like you are. You guys never show your faces becoz you know you are ugly from within. I pity your parents. https://t.co/IB0RMRatxl
— KhushbuSundar (@khushsundar) April 15, 2025
ಖುಷ್ಬೂ ಸುಂದರ್‌ಗೆ 54 ವರ್ಷವಾಗಿದ್ರೂ ಫಿಟ್‌ನೆಸ್‌ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ನಟಿಯ ಬ್ಯೂಟಿ ಬಗ್ಗೆ ಆಗಾಗ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಾರೆ. ಇದೀಗ ಹಸಿರು ಡ್ರೆಸ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿರುವ ಖುಷ್ಬೂ ನೆಟ್ಟಿಗನೊಬ್ಬ ಕೆಣಕಿ ಕಾಮೆಂಟ್ ಮಾಡಿದ್ದಾನೆ. ಇದನ್ನೂ ಓದಿ:ರೀಲ್ಸ್ ಕೇಸ್: ‘ಬಿಗ್ ಬಾಸ್’ ರಜತ್ ಮತ್ತೆ ಅರೆಸ್ಟ್, ವಿನಯ್‌ಗೂ ಬಂಧನ ಭೀತಿ
View this post on Instagram
ತೆಳ್ಳಗೆ ಬಳುಕುವ ಬಳ್ಳಿಯಂತೆ ಕಾಣಿಸಿಕೊಂಡಿರುವ ನಟಿಗೆ ಇದು ಮೌಂಜಾರೋ ಇಂಜೆಕ್ಷನ್ ಮ್ಯಾಜಿಕ್. ಇದರ ಬಗ್ಗೆ ನಿಮ್ಮ ಫಾಲೋವರ್ಸ್‌ಗೂ ತಿಳಿಸಿ, ಅವರು ಬಳಸುವಂತೆ ಆಗಲಿ ಎಂದು ಕಾಮೆಂಟ್ ಮಾಡಿದ್ದಾನೆ. ಇದು ನಟಿಗೆ ಕೋಪ ತರಿಸಿದೆ. ಅದಕ್ಕೆ ನಟಿ, ನಿಮ್ಮಂತಹ ಜನರ ನೋವು ನನಗೆ ಅರ್ಥವಾಗುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಮುಖವನ್ನು ತೋರಿಸುವುದಿಲ್ಲ. ನೀವೆಷ್ಟು ದಡ್ಡರು ಎಂದು ನಿಮಗೆ ತಿಳಿದಿದೆ. ಇದು ನಾಚಿಕೆಗೇಡಿನ ಸಂಗಿನ. ನಿಮ್ಮ ಹೆತ್ತವರ ಬಗ್ಗೆ ಯೋಚಿಸಿದಾಗ ಅಯ್ಯೋ ಅನಿಸುತ್ತದೆ ಎಂದು ಖುಷ್ಬೂ ಖಡಕ್ ಉತ್ತರ ನೀಡಿದ್ದಾರೆ. ನಟಿಯ ನಡೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.