ಬೆಂಗಳೂರು: ತನ್ನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ವಿರುದ್ಧ ಎರಡನೇ ಪತ್ನಿ ಕೀರ್ತಿ ಗೌಡ ಅವರು ದೂರು ದಾಖಲಿಸಿದ್ದಾರೆ.
ಸೆ. 23 ರಂದು ತನಗೆ ಹಾಗೂ ತನ್ನ ಮಾವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಾಗರತ್ನ ಹಲ್ಲೆ ಮಾಡಿದ್ದಾರೆ ಅಂತ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೀರ್ತಿಗೌಡ ಅವರು 4 ಪುಟಗಳ ದೂರು ಸಲ್ಲಿಸಿದ್ದಾರೆ.
- Advertisement
ದೂರುನಲ್ಲೇನಿದೆ?:
ಸೆ.23ರಂದು ದುನಿಯಾ ವಿಜಿಯವರು ಹೈಗ್ರೌಂಡ್ ಪೊಲೀಸ್ ಠಾಣೆಯ್ಲಲಿ ಅರೆಸ್ಟ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಅತ್ತೆ-ಮಾವನನ್ನು ಸಂತೈಸಲೆಂದು ವಿಜಿ ಸ್ನೇಹಿತರಿಬ್ಬರು ಮನೆಗೆ ಬಂದಿದ್ದರು. ಹೀಗಾಗಿ ನಾವೆಲ್ಲ ಮನೆಯಲ್ಲಿ ಕುಳಿತು ಮಾತುಕತೆ ನಡೆಸುತ್ತಿದ್ದೆವು. ಇದೇ ವೇಳೆ ನಾಗರತ್ನ ಅವರು ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಮನೆಗೆ ನುಗ್ಗಿ ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಬಾಯಿಗೆ ಬಂದಂತೆ ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.
- Advertisement
ಇಷ್ಟು ಮಾತ್ರವಲ್ಲದೇ ನನ್ನ ತಲೆಕೂದಲನ್ನು ಎಳೆದಾಡಿ, ಮನಬಂದಂತೆ ಹಲ್ಲೆಗೈದು ನಿನ್ನನ್ನು ಈಗಲೇ ಮುಗಿಸಿಬಿಡುತ್ತೇನೆ ಕಿರುಚಿತ್ತಾ ಕೊಲೆ ಮಾಡುವ ಉದ್ದೇಶದಿಂದ ಕರಿಮಣಿಯನ್ನು ಕುತ್ತಿಗೆಗೆ ಬಿಗಿಹಿಡಿದುಕೊಂಡರು. ಇದರಿಂದಾಗಿ ನನಗೆ ಉಸಿರುಗಟ್ಟಿ ಪ್ರಜ್ಞೆ ತಪ್ಪಿದಂತಾಯಿತು. ಕುತ್ತಿಗೆ ಹಾಗೂ ತಲೆಗೆ ಗಾಯಗಳಾಯಿತು. ಈ ವೇಳೆ ನಮ್ಮ ಮನೆಯವರು ಹಾಗೂ ನಾಗರತ್ನ ಮಧ್ಯೆ ಜಟಾಪಟಿಯೇ ನಡೆದು ಹೋಯಿತು. ವಯಸ್ಸಾಗಿರುವ ನನ್ನ ಅತ್ತೆ-ಮಾವನ ಮೇಲೂ ಕೈ ಮಾಡಿದ್ದಾರೆ. ಹೀಗಾಗಿ ಮಾವನಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ.
ನಾಗರತ್ನ ಅವರ ಜೊತೆ ತಮ್ಮ ಸಂಪತ್ ಕೂಡ ಬಂದಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಡ್ರೈವರನ್ನು ಹೆದರಿಸಿ, ಹಲ್ಲೆಗೈದು, ಅವಾಚ್ಯವಾಗಿ ಬೈದು ಬಲವಂತವಾಗಿ ಕಾರ್ ಕಿತ್ತುಕೊಂಡು ಹೋಗಿದ್ದಾರೆ. ಆದ್ರೆ ನನ್ನ ಪತಿ ಜೈಲಿನಲ್ಲಿದ್ದ ಕಾರಣ ಆ ಚಿಂತೆಯಲ್ಲಿದ್ದ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಒಟ್ಟಿನಲ್ಲಿ ನಾಗರತ್ನ ಅವರ ಕೃತ್ಯದಿಂದ ನನಗೂ- ನನ್ನ ಮಾವನಿಗೂ ಗಾಯಗಳಾಗಿದ್ದು, ವೈದ್ಯರ ಬಳಿ ತೋರಿಸಿ, ಸದ್ಯ ವಿಶ್ರಾಂತಿ ಪಡೆಯುತ್ತಿದ್ದೇವೆ. ಘಟನೆಯಿಂದ ಅತ್ತೆಗೂ ದಿಗ್ಭ್ರಮೆಯಾಗಿದ್ದು, ಅವರೂ ಚಿಕಿತ್ಸೆ ಪಡೆದಿರುತ್ತಾರೆ.
ಈ ಮೊದಲು ಅಂದರೆ ಸೆ.22ರಂದು ನನ್ನ ಗಂಡ ಹಾಗೂ ಸ್ನೇಹತರ ಜೊತೆ ಮಾತನಾಡುತ್ತಿದ್ದ ವೇಳೆ ಮೋನಿಕಾ ಮನೆ ಕಂಪೌಂಡ್ ಗೇಟನ್ನು ಒದ್ದು ಒಳಗೆ ಬಂದು ನನ್ನನ್ನು ಅವಾಚ್ಯವಾಗಿ ನಿಂದಿಸಿದ್ದಾಳೆ. ಅಲ್ಲದೇ ಕಲ್ಲು ತೆಗೆದುಕೊಂಡು ಮನೆ ಬಾಗಿಲಿಗೆ ಹಾನಿ ಮಾಡಿದ್ದಾಳೆ. ಈ ವೇಳೆ ಬಾಗಿಲು ತೆಗೆಯದ ಕಾರಣ ನಿಮಗೆ ತಕ್ಕ ಪಾಠ ಕಲಿಸುತ್ತೇನೆ ಅಂತ ಎಚ್ಚರಿಕೆ ನೀಡಿ ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ಸುಳ್ಳು ದೂರು ನೀಡಿದ್ದಾಳೆ. ಅಲ್ಲದೇ ನಾಗರತ್ನ ಹಾಗೂ ಮಕ್ಕಳು ಸೇರಿ ವಿಜಯ್ ವಿರುದ್ಧ ಸುಖಾಸುಮ್ಮನೆ ದೂರುಗಳನ್ನು ದಾಖಲಿಸುವ ಮೂಲಕ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ.
ಒಟ್ಟಿನಲ್ಲಿ ಘಟನೆಗೆ ಸಂಬಂಧಿಸಿದಂತೆ ನಾಗರತ್ನ ಹಾಗೂ ಆಕೆಯ ತಮ್ಮ ಸಂಪತ್ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಕೀರ್ತಿ ಗೌಡ ತಮ್ಮ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=5y-xIKjMyBI