ಸೌತ್ ನಟಿ ಕೀರ್ತಿ ಸುರೇಶ್ (Keerthy Suresh) ಅವರು ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಜೊತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿ ನಟಿ ಕೀರ್ತಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇದನ್ನೂ ಓದಿ:BBK 11: ನಿಮ್ಮಲ್ಲಿ ಪಾಸಿಟಿವಿಟಿ ಇಲ್ಲ, ಇರೋದೆಲ್ಲ ನೆಗೆಟಿವ್: ಗೌತಮಿ ವಿರುದ್ಧ ಶೋಭಾ ರಾಂಗ್
ಉದ್ಯಮಿ ಆಂಟೋನಿ ತಟ್ಟಿಲ್ (Antony Thattil) ಅವರು ನಟಿ ಕೀರ್ತಿರವರ ಸ್ಕೂಲ್ ಫ್ರೆಂಡ್ ಆಗಿದ್ದು, ಕಳೆದ 15 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಎರಡು ಕುಟುಂಬದ ಒಪ್ಪಿಗೆಯ ಮೇರೆಗೆ ಇದೇ ಡಿ.11 ಮತ್ತು 12ರಂದು ಗೋವಾದಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆಯಂತೆ. ಇದೀಗ ತೆರೆಮರೆಯಲ್ಲಿ ಭರ್ಜರಿಯಾಗಿ ಮದುವೆಗೆ ತಯಾರಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
#KeerthySuresh wedding confirmed with #AntonyThattil in December. pic.twitter.com/An4kXG31aK
— Manobala Vijayabalan (@ManobalaV) November 19, 2024
ಈ ಮದುವೆಯ ಕುರಿತು ನಟಿಯ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯದಲ್ಲೇ ಮದುವೆ ಬಗ್ಗೆ ಅವರು ಘೋಷಿಸಲಿದ್ದಾರೆ ಎನ್ನಲಾಗಿದೆ. ಇದೀಗ ಹುಡುಗನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.
ಅಂದಹಾಗೆ, ಕೀರ್ತಿ ಸುರೇಶ್ ಅವರು ವರುಣ್ ಧವನ್‌ಗೆ ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ‘ಬೇಬಿ ಜಾನ್’ (Baby John) ಎಂಬ ಚಿತ್ರದ ಮೂಲಕ ನಟಿ ಎಂಟ್ರಿ ಕೊಡಲಿದ್ದಾರೆ.