ಸೌತ್‌ನ ಸ್ಟಾರ್ ನಟಿ ಕೀರ್ತಿ ಸುರೇಶ್ (Keerthy Suresh) ಕೊನೆಗೂ ಮದುವೆ ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ. ಲೈಫ್ ಪಾರ್ಟ್ನರ್ ಜೊತೆಗಿನ ಫೋಟೋ ಹಂಚಿಕೊಂಡು ಕೀರ್ತಿ ಸುರೇಶ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಝೈನಾಬ್ ಜೊತೆ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ಅಖಿಲ್ ಅಕ್ಕಿನೇನಿ
ಕಳೆದ ಕೆಲವು ದಿನಗಳಿಂದ ಉದ್ಯಮಿ ಆಂಟೋನಿ (Antony Thattil) ಜೊತೆ ಕೀರ್ತಿ ಮದುವೆ (Wedding) ಸುದ್ದಿ ಸಖತ್ ಸದ್ದು ಮಾಡಿತ್ತು. ಇದು ಯಾವದ್ದಕ್ಕೂ ನಟಿ ಉತ್ತರ ಕೊಟ್ಟಿರಲಿಲ್ಲ. ಇದೀಗ ಭಾವಿ ಪತಿ ಆಂಟೋನಿ ಜೊತೆಗಿನ ಫೋಟೋ ಶೇರ್ ಮಾಡಿ, 15 ವರ್ಷಗಳ ಬಂಧ ಎಂಬುದನ್ನು ನಟಿ ತಿಳಿಸಿದ್ದಾರೆ. ಯಾವಾಗಲೂ ಆಂಟೋನಿ ಮತ್ತು ಕೀರ್ತಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ಅದಕ್ಕೆ ನಟಿ ರಾಶಿ ಖನ್ನಾ, ನಮಗೆ ಈಗ ತಿಳಿದಿದೆ. ಅಭಿನಂದನೆಗಳು ಲವ್ ಎಂದು ಕೀರ್ತಿಗೆ ವಿಶ್ ಮಾಡಿದ್ದಾರೆ.
View this post on Instagram
15 ವರ್ಷಗಳ ಪ್ರೀತಿಗೆ ಕೀರ್ತಿ ಸುರೇಶ್ ಅವರು ಡಿ.11ರಂದು ಮದುವೆಯ ಮುದ್ರೆ ಒತ್ತಲಿದ್ದಾರೆ. ಬಹುಕಾಲದ ಗೆಳೆಯ ಆಂಟೋನಿ ಕೀರ್ತಿ ಗೋವಾದಲ್ಲಿ ಮದುವೆಯಾಗಲಿದ್ದಾರೆ. ಗೋವಾದಲ್ಲಿ (Goa) ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಲಾಗಿದ್ದು, ಸಿನಿಮಾ ಸ್ಟಾರ್ಸ್ ಮತ್ತು ರಾಜಕೀಯದ ಗಣ್ಯರಿಗೆ ಮದುವೆ ಆಹ್ವಾನ ನೀಡಲಿದ್ದಾರೆ ಎನ್ನಲಾಗಿದೆ.
ಇನ್ನೂ ಡಿಸೆಂಬರ್‌ನಲ್ಲಿ ನಟಿಗೆ ಡಬಲ್ ಸಂಭ್ರಮ. ಡಿ.11ರಂದು ಕೀರ್ತಿ ಮದುವೆ ಜೊತೆಗೆ ಡಿ.25ರಂದು ವರುಣ್ ಧವನ್ ಜೊತೆಗಿನ ಮೊದಲ ಬಾಲಿವುಡ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾವನ್ನು ‘ಜವಾನ್’ ಡೈರೆಕ್ಟರ್ ಅಟ್ಲಿ ನಿರ್ದೇಶನ ಮಾಡಿದ್ದಾರೆ.