ಸೌತ್ ನಟಿ ಕೀರ್ತಿ ಸುರೇಶ್ (Keerthy Suresh) ಡಿ.12ರಂದು ಆ್ಯಂಟೋನಿ (Antony Thattil) ಜೊತೆ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾದರು. ಈ ಸಂಭ್ರಮದಲ್ಲಿ ಸ್ಟಾರ್ ನಟ ದಳಪತಿ ವಿಜಯ್ (Vijay Thalapathy) ಕೂಡ ಭಾಗಿಯಾಗಿದ್ದರು. ನಟ ಭಾಗಿಯಾಗಿ ಶುಭಹಾರೈಸಿದ್ದರ ಬಗ್ಗೆ ಫೋಟೋ ಶೇರ್ ಮಾಡಿ ನಟಿ ಸಂತಸ ವ್ಯಕ್ತಪಡಿಸಿದ್ದಾರೆ.
‘ನನ್ನ ಕನಸಿನ ಮದುವೆಯಲ್ಲಿ ನಮ್ಮ ಡ್ರೀಮ್ ಐಕಾನ್ ನಮ್ಮನ್ನು ಆಶೀರ್ವದಿಸಿದಾಗ’ ಎಂದು ನಟಿ ಅಡಿಬರಹ ನೀಡಿ, ವಿಜಯ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಅವರ ಉಪಸ್ಥಿತಿಯನ್ನು ನಟಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:BBK 11: ಗೌತಮಿ ಪಕ್ಷಪಾತಿ ಎಂದು ದೂರಿದ ಮೋಕ್ಷಿತಾ
View this post on Instagram
ಇನ್ನೂ ವಿಜಯ್ ಮತ್ತು ಕೀರ್ತಿ ಸುರೇಶ್ ನಡುವೆ ಉತ್ತಮ ಒಡನಾಟವಿದೆ. ‘ಭೈರವ’ ಮತ್ತು ‘ಸರ್ಕಾರ್’ ಸಿನಿಮಾಗಳಲ್ಲಿ ವಿಜಯ್‌ಗೆ ಕೀರ್ತಿ ನಾಯಕಿಯಾಗಿ ನಟಿಸಿದರು.
ಅಂದಹಾಗೆ, ಆ್ಯಂಟೋನಿ ತಟ್ಟಿಲ್ ಮತ್ತು ಕೀರ್ತಿ 15 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಹಿಂದೂ ಮತ್ತು ಕ್ರೈಸ್ತ ಪದ್ಧತಿಯಂತೆ ಮದುವೆಯಾದರು. ಕುಟುಂಬಸ್ಥರು ಮತ್ತು ನಟಿಯ ಆಪ್ತ ಕಲಾವಿದರು ಈ ಮದುವೆಯಲ್ಲಿ ಭಾಗಿಯಾದರು.